ಮುಅಲ್ಲಿಂ ಮೆಹರ್ ಜಾನ್ : ಪೆರಾಜೆ ಮಸೀದಿ ಖತೀಬ್ ಉಸ್ತಾದ್ ರಾಜ್ಯ ಮಟ್ಟಕ್ಕೆ ಆಯ್ಕೆ

0


ದಕ್ಷಿಣ ಕನ್ನಡ ಜಿಲ್ಲೆಯ ಈಸ್ಟ್ ಜಿಲ್ಲಾ ಮಟ್ಟದ ಮುಅಲ್ಲಿಂ ಮೆಹರ್ ಜಾನ್ ಸೀನಿಯರ್ ವಿಭಾಗದ ನಫೀಸತ್ ಮಾಲೆ,ಕನ್ನಡ ಹಾಡು ಹಾಗೂ ಕಿಸ್ಸ ಪಾಟ್ ಕಾರ್ಯಕ್ರಮಗಳಲ್ಲಿ ಮುಹಿಯದ್ದೀನ್ ಜುಮ್ಮಾ ಮಸೀದಿ ಪೆರಾಜೆ ಖತೀಬ್ ಉಸ್ತಾದರಾದ ಬಹು! ಇಸ್ಮಾಯಿಲ್ ಝೈನಿ ಕೊಂಡಂಗೇರಿ ಇವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ಒಂದು ಸಾಧನೆ ಮಾಡಿ ಜಮಾಅತ್ ಗೆ ಕೀರ್ತಿ ತಂದಿರುವುದಕ್ಕೆ ಮುನವ್ವಿರುಲ್ ಇಸ್ಲಾಂ ಜಮಾಅತ್ ಕಮಿಟಿ ಹಾಗೂ ಎಂ ಐ ಜೆ ಜಿ ಸಿ ಗಲ್ಫ್ ಕಮಿಟಿಯವರು ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತ ಪಡಿಸಿರುತ್ತಾರೆ.