ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಸಂಭ್ರಮದ ದೀಪಾವಳಿ ಹಬ್ಬ ಆಚರಣೆ

0

ಸುಳ್ಯದ ವರ್ತಕರ ಭವನದಲ್ಲಿ ಕಾರ್ಯಚರಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ನ.15 ರಂದು ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಪುಟಾಣಿ ಮಕ್ಕಳು ಮನೆಯಿಂದಲೇ ತಯಾರಿಸಿದಂತ ಗೂಡು ದೀಪ ವಿಶೇಷ ಆಕರ್ಷಣೆಯಾಗಿತ್ತು.
ಹಾಗೂ ಮಕ್ಕಳಿಗೆ ಕ್ರಾಫ್ಟ್ ವರ್ಕ್ ಕಲಿಸಿಕೊಡಲಾಯಿತು.


ದೀಪಾವಳಿ ಹಬ್ಬದ ಮಹತ್ವ ವನ್ನು ಶಾಲಾ ಸಂಚಾಲಕಿ ಗೀತಾಂಜಲಿ ಟಿ.ಜಿ. ತಿಳಿಸಿದರು. ಶಾಲಾ ಶಿಕ್ಷಕಿ ನಿರ್ಮಲಾ, ಸಹಾಯಕಿ ಶ್ವೇತಾ, ಪೋಷಕರು ಉಪಸ್ಥಿತರಿದ್ದರು. ಹಬ್ಬದ ಪ್ರಯುಕ್ತ ಪುಟಾಣಿ ಮಕ್ಕಳು ಸಿಹಿ ತಿಂದು ಸಂಭ್ರಮ ಪಟ್ಟರು.