ಮಾಂಡೋವಿ ನೆಕ್ಸಾ ಶೋರೂಂನಿಂದ‌ ಕಾರು ಖರೀದಿಸಿ‌ ದೀಪಾವಳಿ ಆಚರಿಸಿಕೊಂಡ ಖ್ಯಾತ ಕಿರುತೆರೆ ನಟಿ

0

ರಾಧಾ ರಮಣ ಕಿರುತೆರೆ ಧಾರಾವಾಹಿಯ ಜನಪ್ರಿಯ ನಟಿ ಅನುಷಾ ಹೆಗ್ಡೆ ಈ ದೀಪಾವಳಿ ಹಬ್ಬವನ್ನು ಸುಝುಕಿ ಫ್ರಾಂಕ್ಸ್ ಕಾರು ಖರೀದಿಸಿ ಆಚರಿಸಿಕೊಂಡರು. ತಮ್ಮ ಹೊಸ ಕಾರಿನ ಜೊತೆ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಂಗಳೂರಿನ ಏರ್ಪೋರ್ಟ್ ರೋಡ್ ಮೇರಿ ಹಿಲ್ ನಲ್ಲಿರುವ ಮಾಂಡೋವಿ ನೆಕ್ಸಾ ಶೋರೂಮ್ನಿಂದ ಈ ಹೊಚ್ಚ ಹೊಸ ಕಾರಿನ ಡೆಲಿವರಿ ಪಡೆದುಕೊಂಡರು. ನೆಕ್ಸಾ ಶೋರೂಂನ ಜನರಲ್ ಮ್ಯಾನೇಜರ್ ಅಕ್ಷಯ ಕುಮಾರ್ ಕಾರನ್ನು ಹಸ್ತಾಂತರಿಸಿದರು. ಶೋರೂಂ ಮ್ಯಾನೇಜರ್ ಮೀನ ರೆಗೋ, ಕ್ವಾಲಿಟಿ ಮ್ಯಾನೇಜರ್ ಅಕ್ಷತಾ ಪಿ ಎಸ್, ರಿಲೇಷನ್ಶಿಪ್ ಮ್ಯಾನೇಜರ್ ಯೋಗಿತಾ ಹೆಚ್.ಎನ್. ಹಾಗೂ ಸಂಸ್ಥೆಯ ಸಿಬ್ಬಂದಿಗಳು ಶುಭಹಾರೈಸಿದರು.

ಡೆಲಿವರಿ ಪಡೆದುಕೊಂಡ ನಂತರ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ತಮ್ಮ ಅಭಿಮಾನಿಗಳ ಜೊತೆ ಖುಷಿ ಹಂಚಿಕೊಂಡರು.