ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂದನ್ ರಿಗೆ ಬೀಳ್ಕೊಡುಗೆ

0

ಸಂಪಾಜೆ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ಮಧುಸೂದನ್ ಎಂ.ಕೆ ಅವರಿಗೆ ನ.17ರಂದು ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
2019ರ ನವಂಬರ್ ತಿಂಗಳಿನಲ್ಲಿ ಸಂಪಾಜೆ ವಲಯಕ್ಕೆ ವಲಯ ಅರಣ್ಯಾಧಿಕಾರಿಯಾಗಿ ನಾಲ್ಕು ವರ್ಷಗಳ ಕಾಲ ಸಂಪಾಜೆ ಪ್ರಾದೇಶಿಕ ವಲಯ ಇಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಸೇವೆಸಲ್ಲಿಸಿ ಪ್ರಸ್ತುತ ತಿತಿಮತಿ ಸರ್ಕಾರಿ ನಾಟಾ ಸಂಗ್ರಹಾಲಯ ಇಲ್ಲಿಗೆ ವರ್ಗಾವಣೆಗೊಂಡಿರುತ್ತಾರೆ. ಇವರಿಗೆ ಸಂಪಾಜೆ ವಲಯದ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.


ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್ ಎನ್., ಪಂಜ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿಗಳಾದ ಗಿರೀಶ್, ಶನಿವಾರಸಂತೆ ವಲಯದ ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ಗಾನಶ್ರೀ ಉಪಸ್ಥಿತರಿದ್ದರು. ಇವರೊಂದಿಗೆ ಸರ್ಕಾರಿ ಪ್ರೌಢಶಾಲೆ ಚೆಂಬು ಇಲ್ಲಿಯ ಶಿಕ್ಷಕರಾದ ಡಾ. ಯೋಗೀಶ ಬಿ.ಎಸ್, ನವಮಿ ಸ್ಟೋರ್ ಕಲ್ಲುಗುಂಡಿಯ ಮಾಲೀಕರಾದ ಚಕ್ರಪಾಣಿ ಯು.ಬಿ, ಸಂಪಾಜೆ ಗ್ರಾಮ ಪಂಚಾಯಿತಿಯ ಸದಸ್ಯರಾದ ನವೀನ್, ಸುಳ್ಯ ವಲಯದ ಉಪವಲಯ ಅರಣ್ಯಾಧಿಕಾರಿಯಾದ ಚಂದ್ರು ಬಿ.ಜಿ. ಹಾಗೂ ಶ್ರೀಯುತ ಅಪ್ಪಣ್ಣ ಕೆ.ಎಫ್.ಡಿ.ಸಿ ಸಿಬ್ಬಂದಿ ಅತಿಥಿಗಳಾಗಿ ಭಾಗವಹಿಸಿದ್ದರು.


ಮುಖ್ಯ ಅತಿಥಿಗಳು ಮಧುಸೂದನ್ ಅವರ ಕಾರ್ಯವೈಖರಿ, ಸ್ನೇಹ ಪರತೆ, ಮೌಲ್ಯಗಳು ಮತ್ತು ಆದರ್ಶವನ್ನು ಕುರಿತು ಮಾತನಾಡಿದರು. ತಾವು ಕಂಡಂತೆ ಹಾಗೂ ತಾವು ಅವರೊಂದಿಗೆ ಕಲೆತು ಕಲಿತ ಅನುಭವಗಳನ್ನು ಕುರಿತು ಉಪವಲಯ ಅರಣ್ಯಾಧಿಕಾರಿಗಳಾದ, ವಿಜೇಂದ್ರ, ಬಸವರಾಜಪ್ಪ, ನಿಸಾರ್ ಮಹಮದ್ ಹಾಗು ಗಸ್ತು ಅರಣ್ಯ ಪಾಲಕರಾದ ಕಾರ್ತಿಕ್ ಹಾಗೂ ಸಿಬ್ಬಂದಿಯಾದ ಭರತ್ ತಮ್ಮ ಅನಿಸಿಕೆಗಳನ್ನ ಹಂಚಿಕೊಂಡರು.
ಕಚೇರಿ ಸಿಬ್ಬಂದಿಗಳಾದ ರತ್ನಾಕರ್, ವಲ್ಸಮ್ಮ, ಶ್ರೀಮತಿ ಮೋಹಿನಿ, ವೆಂಕಟರಮಣ, ಉಪವಲಯ ಅರಣ್ಯಾಧಿಕಾರಿ ವಿನಯ್ ಕೃಷ್ಣ ಎಂ.ಸಿ, ಗಸ್ತು ಅರಣ್ಯಪಾಲಕರಾದ ಜಗನ್ನಾಥ್, ಜನಾರ್ಧನ್, ಚಂದ್ರಪ್ಪ ಬಣಕಾರ್, ಶ್ರೀಮತಿ ತಿಲಕ, ಪುನೀತ್, ನಾಗರಾಜ್ ಹಾಗೂ ಸಸ್ಯ ಕ್ಷೇತ್ರ ಸಿಬ್ಬಂದಿಗಳು, ಆರ್.ಆರ್.ಟಿ ಸಿಬ್ಬಂದಿಗಳು, ಎಮ್.ಆರ್. ಸಿಬ್ಬಂದಿಗಳು ಮತ್ತು ಗ್ರಾಮಸ್ಥರಾದ ರಾಮಚಂದ್ರ ಮತ್ತು ದಂಪತಿಗಳು ಹಾಗೂ ಸಂಪಾಜೆ, ಚೆಂಬು ಹಾಗೂ ಕಲ್ಗುಂಡಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಚಂದ್ರಪ್ಪ ಬಣಕಾರ್ ನಿರೂಪಿಸಿದರು, ಬಸವರಾಜಪ್ಪ ಸ್ವಾಗತಿಸಿದರು, ಶ್ರೀಮತಿ ತಿಲಕ ಪ್ರಾಸ್ತಾವಿಕ ಭಾಷಣ ಮಾಡಿದರು, ವಿಜೇಂದ್ರ ಇವರು ವಂದನಾರ್ಪಣೆಯನ್ನು ಸಲ್ಲಿಸಿದರು.