ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಲಾಭಾಂಶ ವಿತರಣಾ ಕಾರ್ಯಕ್ರಮ

0

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಲಾಭಾಂಶ ವಿತರಣಾ ಕಾರ್ಯಕ್ರಮವು ನ.16ರಂದು ಒಡಿಯೂರಿನಲ್ಲಿ ನಡೆದ ಸಂಸ್ಕೃತಿ ಸಂಸ್ಕಾರ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ಒಟ್ಟು 47 ವಿಕಾಸವಾಹಿನಿ ಸ್ವ ಸಹಾಯ ಸಂಘಗಳಿಗೆ 11,63,357/- ರೂ. ಲಾಭಾಂಶ ಮೊತ್ತವನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಲಾಭಾಂಶ ಪಡೆದ ಪಂಜ ವಲಯದ ಎಣ್ಮೂರು ಗ್ರಾಮದ ಒಡಿಯೂರು ಶ್ರೀ ಬದ್ರಿಯಾ ವಿಕಾಸವಾಹಿನಿ ಸ್ವ ಸಹಾಯ ಸಂಘಕ್ಕೆ 1,03,640/- ರೂ. ಹಾಗೂ ಸುಳ್ಯ ವಲಯದ ಅಜ್ಜಾವರ ಗ್ರಾಮದ ಒಡಿಯೂರು ಶ್ರೀ ಹರಿಕೃಷ್ಣ ವಿಕಾಸವಾಹಿನಿ ಸ್ವ ಸಹಾಯ ಸಂಘ ವಿಷ್ಣುನಗರ ಈ ತಂಡಕ್ಕೆ 99,348/- ರೂ. ಮೊತ್ತದ ಲಾಭಾಂಶ ಚೆಕ್ ನ್ನು ಪೂಜ್ಯ ಶ್ರೀಗಳು ಹಸ್ತಾಂತರ ಮಾಡಿದರು.