ಸುಬ್ರಹ್ಮಣ್ಯ: ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸ್ವಚ್ಚತೆ

0

ಪ್ರತಿವಾರ ಸ್ವಚ್ಚತೆ ಮಾಡಿದರೂ ಪ್ರೋತ್ಸಾಹ ನೀಡಲು ಮುಂದಾಗದ ಜನತೆ

ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಪ್ರತಿ ಬಾನುವಾರ ನಡೆಯುವ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯ ಇಕ್ಕೆಲಗಳು ಮತ್ತು ಮುಖ್ಯ ರಸ್ತೆಯನ್ನು ಸ್ವಯಂಸೇವಕರು ಗಳನ್ನು ಒಳಗೊಂಡು ನ.19 ರಂದು ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು.

ಕಾಶಿ ಕಟ್ಟೆ ಯಿಂದ ಕುಮಾರಧಾರದ ತನಕ ಮುಖ್ಯ ರಸ್ತೆಯಲ್ಲಿ ಸ್ವಚ್ಛತ ಕಾರ್ಯಕ್ರಮ ಮಾಡಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ)ಕಡಬ ಘಟಕದ ನಿಯೋಜಿತಾ ಅಧ್ಯಕ್ಷ ಶ ಸುಂದರ ಪೂಜಾರಿ ಅಂಗಣ ಭಾಗಿಯಾದರು. ಅಲ್ಲದೆ ತಂಡದಲ್ಲಿ ತಿಂಗಳಿಗೆ ಒಬ್ಬ ನಾಯಕನನ್ನು ಗುರುತಿಸಿ ಕೊನೆಯ ವಾರದಲ್ಲಿ ಸನ್ಮಾನಿಸಿ ಪ್ರೋತ್ಸಹಿಸುವಂತಹ ಕೆಲಸವನ್ನು ಮಾಡಲಾಗುತಿದ್ದು ಅದರಂತೆ ಈ ವಾರ ಕುಮಾರಧಾರದ ರವಿ ಕುಮಾರ್ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ರವಿ ಕಕ್ಕೆ ಪದವು, ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಪೂರ್ವ ಅಧ್ಯಕ್ಷರಾದ ಮೋಹನ್ ದಾಸ್ ರೈ, ಆಟೋ ಚಾಲಕಮಾಲಕ ಸಂಘದ ಅಧ್ಯಕ್ಷ ದಿನೇಶ್, ಟ್ರಸ್ಟಿನ ಸದಸ್ಯರು, ಸ್ವಯಂಸೇವಕರ ತಂಡ, ಮುಂದಿನ ತಿಂಗಳಿಗೆ ನಾಯಕರಾಗಿ ಆಯ್ಕೆಯಾದ ಜನಾರ್ದನ ಮತ್ತಿತರರು ಉಪಸ್ಥಿತರಿದ್ದರು.

ಟ್ರಸ್ಟ್ ವತಿಯಿಂದ ಪ್ರತಿವಾರ ಸ್ವಚ್ಚತಾ ಕಾರ್ಯಕ್ರಮ ಮಾಡಲಾಗುತಿದ್ದರೂ ಈ ಬಗ್ಗೆ ಸ್ಥಳೀಯ ಆಡಳಿತ ಯಾವುದೇ ಶಾಶ್ವತ ಸೂಕ್ತ ಕ್ರಮ ಕೈಗೊಳ್ಳದಿರುವುದಕ್ಕೆ ಅಕ್ರೋಶ ವ್ಯಕ್ತವಾಗಿದೆ. ಭಕ್ತಾಧಿಗಳು, ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ತಡೆಯಲು ಪೈನ ಹಾಕುವ ವ್ಯವಸ್ಥೆ ಅಥವಾ ಇನ್ಯಾವುದೇ ಕಾನೂನಾತ್ಮಕ ಕ್ರಮ ಕೈಗೊಳ್ಳದಿದ್ದಲ್ಲಿ ಇದು ಸಮಸ್ಯೆಯಾಗಿಯೇ ಉಳಿಯಲಿದೆ ಎಂದು ಟ್ರಸ್ಟ್ ನವರು ಆತಂಕ ವ್ಯಕ್ತ ಪಡಿಸಿದ್ದಾರೆ.