ಸಂಪಾಜೆ ಪಯಸ್ವಿನಿ ಸಹಕಾರಿ ಸಂಘದ ಬಾಲೆಂಬಿ ಶಾಖೆಯಲ್ಲಿ ಕಾಳುಮೆಣಸು ಖರೀದಿ ಪ್ರಾರಂಭ

0


ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚೆಂಬು ಗ್ರಾಮದ ಬಾಲೆಂಬಿ ಶಾಖೆಯಲ್ಲಿ ಕ್ಯಾಂಪ್ಕೋ ಸಂಸ್ಥೆಯ ಸಹಯೋಗದಲ್ಲಿ ಕಾಳುಮೆಣಸು ಖರೀದಿಯು ನ.22ರದು ಪ್ರಾರಂಭಗೊಂಡಿತು.

ಖರೀದಿ ಪ್ರಕ್ರಿಯೆಗೆ ಜ್ಯೋತಿ ಬೆಳಗುವ ಮೂಲಕ ಸಂಘದ ಅದ್ಯಕ್ಷ ಎನ್.ಸಿ‌. ಅನಂತ್ ಊರುಬೈಲು ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ
ಸಿ.ಎಂ. ಓ ಜಯರಾಮ ಶೆಟ್ಟಿ , ನಿತೀಶ್ ಕೋಟ್ಯಾನ್, ಕುಂಞಂಬು ,ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಆನಂದ , ನಿರ್ದೇಶಕರಾದ ಆದಂಕುಂಞಿ , ದಯಾನಂದ. ಪಿ.ಡಿ.,ಯಶವಂತ.ಡಿ.ಡಿ. ಸೇರಿದಂತೆ ಸಹಕಾರಿ ಸಂಘದ ಸಿಬ್ಬಂದಿಗಳು ಮತ್ತು ಕೃಷಿಕರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.