ಐವರ್ನಾಡು ಗ್ರಾಮ ಪಂಚಾಯತ್ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆ

0

ಐವರ್ನಾಡ್ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ನ.22 ರಂದು ರಾಷ್ಟೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವು ನಡೆಯಿತು. ಗ್ರಾ.ಪಂಚಾಯತ್ ಅಧ್ಯಕ್ಷರಾದ ಲೀಲಾವತಿ ಕುತ್ಯಾಡಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಳಾದ ಶ್ಯಾಮ್ ಪ್ರಸಾದ್ ರವರು ಗ್ರಂಥಾಲಯದ ಮಹತ್ವದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿಯನ್ನು ನೀಡಿದರು. ಪಂಚಾಯತ್ ಉಪಾಧ್ಯಕ್ಷರು ಗ್ರಂಥಾಲಯ ದ ಪುಸ್ತಕದ ಉಪಯೋಗ ಪಡೆದುಕೊಳ್ಳುವ ಬಗ್ಗೆ ಮಾಹಿತಿ ಯನ್ನು ನೀಡಿದರು.

ಗ್ರಂಥಾಲಯ ಮೇಲ್ವಿಚಾರಕರು ಗ್ರಂಥಾಲಯ ಬಗ್ಗೆ ಪ್ರಸ್ತಾವಿಕ ಮಾತುಗಳನ್ನು ಹೇಳಿದರು.ಕಾರ್ಯಕ್ರಮದಲ್ಲಿ ಪುಸ್ತಕ ಪ್ರದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ದೇವಿಪ್ರಸಾದ್ ಕೊಪ್ಪತಡ್ಕ ಮತ್ತು ಸುಜಾತ ಪವಿತ್ರಮಜಲು ಹಾಗೂ ನರೇಗಾ ಯೋಜನೆಯ ಸಹಾಯಕ ಅಭಿಯಂತರಾದ ನಿಶಾರವರು ಗ್ರಾಮಸ್ಥರು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.