ರೈತರು‌ ಕಡ್ಡಾಯವಾಗಿ ಎಫ್.ಐ.ಡಿ. ಮಾಡಿಸಿಕೊಳ್ಳಿ : ಇಲ್ಲವಾದಲ್ಲಿ ಸರಕಾರದ ಪರಿಹಾರ ಹಣ ಸಿಗೋದಿಲ್ಲ

0

ಮಾಹಿತಿಗಾಗಿ ಗ್ರಾಮ ಆಡಳಿತಾಧಿಕಾರಿ – ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ

ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಎಫ್.ಐ.ಡಿ. ಮಾಡಿಸಿಕೊಳ್ಳಬೇಕು. ಎಫ್.ಐ.ಡಿ. ಈಗಾಗಲೇ ಆಗಿದ್ದಲ್ಲಿ ನಿಮಗೆ ಸಂಬಂಧಿಸಿದ ಎಲ್ಲಾ ಸರ್ವೆ ನಂಬರಗಳು ಜೋಡಣೆಯಾಗಿದೆಯೋ ಅಥವಾ ಇಲ್ಲವೋ ಎಂದು ಕೂಡಲೇ ಪರಿಶೀಲಿಸಿಕೊಳ್ಳಿ ಜಂಟಿ ಖಾತೆದಾರರಾಗಿದ್ದಲ್ಲಿ ಪ್ರತಿಯೊಬ್ಬರು ಪ್ರತ್ಯೇಕವಾಗಿ ಎಫ್.ಐ.ಡಿ. ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ಹಾಗೂ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ರೈತರು ತಮಗೆ ಸಂಬಂಧಿಸಿದ ಎಲ್ಲಾ ಸರ್ವೆ ನಂಬರಗಳನ್ನು ಎಫ್.ಐ.ಡಿ. ಮಾಡಿಸದಿದ್ದಲ್ಲಿ ಸರ್ಕಾರದ ವತಿಯಿಂದ ಬರುವಂತಹ ಯಾವುದೇ ಪರಿಹಾರ ಹಣವು ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ. ಇದಕ್ಕೆ ನೀವೇ ಹೋಣೆಯಾಗಿರುತ್ತೀರಿ. ಆದ್ದರಿಂದ ಎಲ್ಲಾ ರೈತರು ನಿಮ್ಮ ಹೆಸರಿನಲ್ಲಿ ಎಲ್ಲಾ ಸರ್ವೆ ನಂಬರಗಳನ್ನು ಎಫ್.ಐ.ಡಿ. ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳು ಅಥವಾ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ಸಂಪರ್ಕಿಸಲು ಕೋರಿದೆ.

ಎಫ್.ಐ.ಡಿ. ಮಾಡಿಸಿಕೊಳ್ಳಲು ಬೇಕಾದ ದಾಖಲಾತಿಗಳು :

೧. ಆಧಾರ ಕಾರ್ಡ

೨. ಬ್ಯಾಂಕ್ ಪಾಸ್ ಬುಕ್
RTC

೪. ಮೋಬೈಲ್ ನಂ. ಎಂದು ಅವರು ವಿವರ ನೀಡಿದ್ದಾರೆ.