ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಅಡಿಯಲ್ಲಿ ಶಾಂತಿ ವನ ಟ್ರಸ್ಟ್ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುಳ್ಯ ಇದರ ವತಿಯಿಂದ ನಡೆದ ಸುಳ್ಯ ತಾಲೂಕು ಮಟ್ಟದ ಜ್ಞಾನ ಶರಧಿ ಮತ್ತು ಜ್ಞಾನವಾರಿಧಿ ಪುಸ್ತಕ ಆಧಾರಿತ ವಿವಿಧ ಸ್ಪರ್ಧೆಗಳು ಅಮೃತ ಭವನ ಸುಳ್ಯ ಇಲ್ಲಿ ನಡೆಯಿತು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಂಯೋಜಕರಾದ ನಳಿನಿ ವಹಿಸಿದ್ದರು.
ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ಇಲ್ಲಿನ ಮುಖ್ಯ ಶಿಕ್ಷಕಿ ಸುನಂದ ಕಾರ್ಯಕ್ರಮ ಉದ್ಘಾಟಿಸಿದರು. ಶಾಂತಿವನ ಟ್ರಸ್ಟಿನ ನಿರ್ದೇಶಕರಾದ ಶಶಿಕಾಂತ್ ಜೈನ್ ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾತನಾಡಿದರು ಶ್ರೀಮತಿ ಮಮತಾ ಸ್ವಾಗತಿಸಿ, ಆಲೆಟ್ಟಿ ಪ್ರೌಢಶಾಲೆಯ ಸಹ ಶಿಕ್ಷಕ ಅರುಣ್ ಕುಮಾರ್ ವಂದಿಸಿದರು. ಪ್ರಬಂಧ ಭಾಷಣ ಚಿತ್ರಕಲೆ ಹಾಗೂ ಶ್ಲೋಕ ಕಂಠಪಾಠ ಸ್ಪರ್ಧೆ ನಡೆದ ಬಳಿಕ ಸಮಾರೋಪ ಸಮಾರಂಭ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಬಿ. ಇ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಶಿಕ್ಷಣ ಸಂಯೋಜಕರಾದ ಶ್ರೀಮತಿ ಸಂಧ್ಯಾ ಕುಮಾರಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಮಮತಾ ಮತ್ತು ಶ್ರೀಮತಿ ಸವಿತಾ ಉಪಸ್ಥಿತರಿದ್ದರು ಶ್ರೀಮತಿ ಜನಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.
ಫಲಿತಾಂಶ : ಪ್ರಾಥಮಿಕ ಶಾಲಾ – ಭಾಷಣ ಸ್ಪರ್ಧೆ : ಸ್ವಾತಿ ಕೆ.ಟಿ. ಸ.ಉ.ಹಿ.ಪ್ರಾ.ಶಾಲೆ ಕೋಲ್ಚಾರು (ಪ್ರ), ಅನುಷಾ ಕೆ. ಸ.ಹಿ.ಪ್ರಾ.ಶಾಲೆ ಜಟ್ಟಿಪಳ್ಳ (ದ್ವಿ), ಆದ್ಯ ಕೆ.ಟಿ. ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ (ತೃ), ಪ್ರಬಂಧ ಸ್ಪರ್ಧೆ : ಸಾನ್ವಿ ಕೆ.ಡಿ. ಸ್ನೇಹ ವಿದ್ಯಾಸಂಸ್ಥೆ ಸುಳ್ಯ (ಪ್ರ), ಸಾನ್ವಿ ಪಿ.ಎನ್. ಸ.ಹಿ.ಪ್ರಾ.ಶಾಲೆ ಐವರ್ನಾಡು (ದ್ವಿ), ದೀಪ್ತಿ ಬಿ ಸ.ಹಿ.ಪ್ರಾ.ಶಾಲೆ ಪೆರುವಾಜೆ (ತೃ), ಕಂಠಪಾಠ ಸ್ಪರ್ಧೆ : ಅಪ್ರಮೇಯ ಆರ್.ಯು. ಸ್ನೇಹ ವಿದ್ಯಾಸಂಸ್ಥೆ ಸುಳ್ಯ (ಪ್ರ), ಪೂಜಾಶ್ರೀ ಬಿ. ಸ.ಉ.ಹಿ.ಪ್ರಾ.ಶಾಲೆ ಮುಳ್ಯ ಅಟ್ಲೂರು (ದ್ವಿ), ವಂದಿತ ವಿ.ಎಸ್. ರೋಟರಿ ಹಿ.ಪ್ರಾ.ಶಾಲೆ ಸುಳ್ಯ (ತೃ), ಚಿತ್ರಕಲೆ : ಸಾನ್ವಿ ಅಟ್ಲೂರು ರೋಟರಿ ವಿದ್ಯಾಸಂಸ್ಥೆ ಸುಳ್ಯ (ಪ್ರ), ಸಿ.ಡಿ.ತನುಜ್ಞ ಸ.ಹಿ.ಪ್ರಾ.ಶಾಲೆ ಐವರ್ನಾಡು (ದ್ವಿ), ಆದಿತ್ಯ ಕೆ. ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ (ತೃ) ಬಹುಮಾನ ಪಡೆದುಕೊಂಡರು.
ಪ್ರೌಢಶಾಲಾ ವಿಭಾಗ – ಭಾಷಣ : ಕುಶಿ ವೈ.ಟಿ. ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆ ಸುಳ್ಯ (ಪ್ರ), ಅನನ್ಯ ಕೆ.ಎನ್. ಸ.ಪ.ಪೂ. ಕಾಲೇಜು ಸುಳ್ಯ (ದ್ವಿ), ಶ್ರೀಯಾ ಎಂ. ಎಸ್. ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ (ತೃ), ಪ್ರಬಂಧ : ಸಾಕ್ಷಿ ಕೆ ಸರಕಾರಿ ಪ್ರೌಢಶಾಲೆ ಎಣ್ಮೂರು (ಪ್ರ), ಚಿತ್ರ ಸ.ಪ.ಪೂ. ಕಾಲೇಜು ಸುಳ್ಯ (ದ್ವಿ), ಸ್ಮಿತಾ ಕೆ ಸ.ಪ್ರೌ.ಶಾಲೆ ಅಜ್ಜಾವರ (ತೃ), ಕಂಠಪಾಠ : ಸ್ವಸ್ತಿ ಹೆಚ್.ಆರ್. ಸ.ಪ.ಪೂ. ಕಾಲೇಜು ಸುಳ್ಯ (ಪ್ರ), ರಾಜೇಶ್ವರಿ ರೈ ಸರಕಾರಿ ಪ್ರೌಢಶಾಲೆ ಎಣ್ಮೂರು (ದ್ವಿ), ವೈಷ್ಣವಿ ಸರಕಾರಿ ಪ್ರೌಢಶಾಲೆ ಅಜ್ಜಾವರ (ತೃ), ಚಿತ್ರಕಲೆ : ಧನಲಕ್ಷ್ಮೀ ಎಸ್ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ (ಪ್ರ), ವರ್ಷಾ ಬೇಕಲ್ ಜೆ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ (ದ್ವಿ), ವಿದ್ಯಾಲತಾ ಪಿ.ಎನ್. ಸ್ನೇಹ ವಿದ್ಯಾಸಂಸ್ಥೆ ಸುಳ್ಯ (ತೃ) ಬಹುಮಾನ ಪಡೆದುಕೊಂಡರು.