ರೆಪ್ಕೋ ಬ್ಯಾಂಕಿನ 55 ನೇ ಸಂಸ್ಥಾಪನಾ ದಿನಾಚರಣೆ

0

ಬ್ಯಾಂಕಿನ ನೂತನ ಯೋಜನೆಗಳಿಗೆ ಚಾಲನೆ

ತಮಿಳುನಾಡು ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಅನಿವಾಸಿ ತಮಿಳರ ಕಲ್ಯಾಣ ಸಚಿವರಾದ ಗಿಂಗಿ ಕೆ.ಎಸ್.ಮಸ್ತಾನ್ ಅವರು ಪಿಟಿ ತಿಯಾಗರಾಯರ್ ಚೆನ್ನೈನಲ್ಲಿ ನಡೆದ ರೆಪ್ಕೋ ಬ್ಯಾಂಕಿನ 55 ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಬ್ಯಾಂಕಿನ ವಿಶೇಷ ಯೋಜನೆಗಳಿಗೆ ಚಾಲನೆ ನೀಡಿದರು.

‘ರೆಪ್ಕೋ 55’- ಹಿರಿಯ ನಾಗರಿಕರಿಗೆ ವರ್ಷಕ್ಕೆ 8.75% ವರೆಗಿನ ವಿಶೇಷ ಬಡ್ಡಿ ದರದೊಂದಿಗೆ ಹೊಸ ಠೇವಣಿ ಯೋಜನೆ, ಇತರರಿಗೆ ಶೇ.8.25 ಮತ್ತು 18 ವರ್ಷದೊಳಗಿನ ಮಕ್ಕಳಿಗೆ 3ರಿಂದ 5 ವರ್ಷಕ್ಕೆ ಶೇ.8.50, ಹೊಸ ಸಾಲ ಯೋಜನೆ , ರೆಪ್ಕೋ ಓವರ್‌ಡ್ರಾಫ್ಟ್ ಸಾಲ (ಡ್ರಾಪ್ ಲೈನ್ ಓವರ್‌ಡ್ರಾಫ್ಟ್ ಸಾಲ ಯೋಜನೆ) ವ್ಯಾಪಾರ ಅಭಿವೃದ್ಧಿ ಮತ್ತು ಇತರ ಬ್ಯಾಂಕ್ ಉದ್ದೇಶಗಳಿಗಾಗಿ ಓ.ಡಿ. ಮಿತಿಗಳ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ.

ಚಿನ್ನಾಭರಣಗಳ ಮೇಲೆ ಗ್ರಾಂ.ಗೆ 4,800 ರವರೆಗೆ ಸಾಲ ನೀಡಲಾಗುವುದು.ತಿಂಗಳಿಗೆ ಕೇವಲ 84 ಪೈಸೆ ಬಡ್ಡಿ ದರದಲ್ಲಿ , ಆಸ್ತಿ ಅಡಮಾನ ಅಥವಾ ಗೃಹ ನಿರ್ಮಾಣಕ್ಕೆ ,5 ಲಕ್ಷದಿಂದ 5 ಕೋಟಿಯವರೆಗೆ ಶೇ.9.90 ಬಡ್ಡಿದರದಲ್ಲಿ ಸಾಲ ನೀಡಲಾಗುವುದು ಎಂದು ಬ್ಯಾಂಕಿನ ಮುಖ್ಯ ಶಾಖಾಧಿಕಾರಿಗಳು ತಿಳಿಸಿದ್ದಾರೆ.