ನಾಳೆ (ಡಿ.5) ಸುಳ್ಯದಲ್ಲಿ ‌ಕರೆಂಟಿಲ್ಲ

0

ಡಿ.5 ರಂದು ಮಂಗಳವಾರ ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ
11 ಕೆ.ವಿ. ಸುಳ್ಯ-1, ಕೇರ್ಪಳ, ಸುಳ್ಯ – ಶ್ರೀರಾಂಪೇಟಸ, ಜಬಳೆ, ಡಿಪ್ಪೊ, ತೊಡಿಕಾನ, ಕೋಲ್ಚಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರ್ ಗಳಲ್ಲಿ ಬೆಳಗ್ಗೆ 10 ರಿಂದ ಸಾಯಂಕಾಲ6 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ ಎ.ಇ.ಇ. ತಿಳಿಸಿದ್ದಾರೆ.