ಗಾಂಧಿನಗರದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ನಿರ್ಮಾಣದ ಕನಸು : ಶರೀಫ್ ಕಂಠಿ
ಸುಳ್ಯ ಗಾಂಧಿನಗರ ಪೇಟೆಯಿಂದ ಗಾಂಧಿನಗರ ಪ್ರೌಢಶಾಲೆ ಕಡೆಗೆ ಹೋಗುವ ರಸ್ತೆಯನ್ನು ಅಗಲೀಕರಣಗೊಳಿಸಿ, ಇಂಟರ್ ಲಾಕ್ ಅಳವಡಿಸುವ ಕಾರ್ಯಕ್ಕೆ ನ.ಪಂ.ಸದಸ್ಯ ಶರೀಫ್ ಕಂಠಿ ಚಾಲನೆ ನೀಡಿದ್ದಾರೆ.
ಸುಳ್ಯ ನಗರದ ಮೇಲಿನ ಪೇಟೆಗೆ ಗಾಂಧಿನಗರ ಎಂದು ಹೆಸರಿಡಲಾಗಿದೆ. ಆದರೆ ಇಲ್ಲಿ ಗಾಂಧೀಜಿಯವರಿಗೆ ಸಂಬಂಧಿಸಿ ಯಾವ ಸ್ಮಾರಕವೂ ಇಲ್ಲ. ಆದ್ದರಿಂದ ರಸ್ತೆಯನ್ನು ಅಗಲಗೊಳಿಸಿ ಬದಿಯಲ್ಲಿ ಒಂದು ಕಟ್ಟೆ ಮಾಡಿ ಅದಕ್ಕೆ ಗಾಂಧಿಕಟ್ಟೆ ಎಂದು ಹೆಸರಿಡುವ ಹಾಗೂ ಮುಂದೆ ಆ ಕಟ್ಟೆಯಲ್ಲಿ ಗಾಂಧಿ ಚಿಂತನ ವೇದಿಕೆಯವರ ಸಲಹೆ ಪಡೆದು ಮಹಾತ್ಮ ಗಾಂಧೀಜಿಯವರ ಪ್ರತಿಮೆ ಸ್ಥಾಪಿಸುವ ಕನಸು ನಮ್ಮಲ್ಲಿದೆ ಎಂದು ಶರೀಫ್ ಕಂಠಿ ಸುದ್ದಿಯೊಂದಿಗೆ ಹೇಳಿದರು. ಗಾಂಧಿನಗರದಿಂದ ಪ್ರೌಢಶಾಲೆ ಕಡೆಗೆ ಹೋಗುವ ರಸ್ತೆಯ ಎರಡು ಬದಿಯ ಗೋಡೆಯಲ್ಲಿ ಮಹಾತ್ಮ ಗಾಂಧಿಯ ಚಿಂತನೆಗಳ ಬಗ್ಗೆ ಚಿತ್ರಬಿಡಿಸಿ ಸಾರ್ವಜನಿಕರಲ್ಲಿ ಗಾಂಧಿ ಚಿಂತನೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುವುದು.ಅದರೊಂದಿಗೆ ರಸ್ತೆಯ ಎದುರಿನ ಭಾಗದಲ್ಲಿ ಸುಂದರವಾದ ಅವರಣಗೋಡೆ ನಿರ್ಮಿಸಿ ಕೊಡುವ ಚಿಂತನೆ ಇದೆ ಎಂದು ಕಂಠಿ ಅಭಿಪ್ರಾಯ ಹಂಚಿಕೊಂಡರು.