ಡಿ.28-29: ಆಲೆಟ್ಟಿ- ದೋಣಿಮೂಲೆ ವಿಷ್ಣುಮೂರ್ತಿ ಸಪರಿವಾರ ದೈವಸ್ಥಾನದಲ್ಲಿ ದೈವಗಳ ಕೋಲೋತ್ಸವ

0

ಆಲೆಟ್ಟಿ ಗ್ರಾಮದ ದೋಣಿಮೂಲೆ ಶ್ರೀ ವಿಷ್ಣುಮೂರ್ತಿ ಸಪರಿವಾರ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ಮತ್ತು ಉಪ ದೈವಗಳ ಕೋಲವು ಡಿ.28 ಮತ್ತು 29 ರಂದು ನಡೆಯಲಿರುವುದು. ಡಿ.11 ಮತ್ತು 12 ರಂದು ನಡೆಯಬೇಕಾಗಿದ್ದ ಶ್ರೀ ದೈವಗಳ ಕೋಲವು ಕಾರಣಾಂತರಗಳಿಂದ ಮದೂಡಲ್ಪಟ್ಟಿದ್ದು ಇದೇ ತಿಂಗಳ 28 ರಂದು ರಾತ್ರಿ ಶ್ರೀ ದೈವಗಳ ನಡಾವಳಿಗೆ ಕೂಡಿ ಮರುದಿನ ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ಮತ್ತು ಪಾಷಾಣಮೂರ್ತಿ ಹಾಗೂ ಶ್ರೀ ಗುಳಿಗ ದೈವಗಳ ಕೋಲವು ನಡೆಯಲಿರುವುದಾಗಿ ದೋಣಿಮೂಲೆ ಕುಟುಂಬಸ್ಥರ ಪರವಾಗಿ ‌ಪುರುಷೋತ್ತಮ ದೋಣಿಮೂಲೆ ಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.