ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ವರ್ಷಂಪ್ರತೀಯಂತೆ ಕ್ಷೇತ್ರದ ತಂತ್ರಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳವರ ನೇತೃತ್ವದಲ್ಲಿ ಡಿ.15 ಮತ್ತು 16ರಂದು ವೈಧಿಕ ಕಾರ್ಯಕ್ರಮಗಳೊಂದಿಗೆ ವರ್ಷಾವಧಿ ಜಾತ್ರೋತ್ಸವವು ನಡೆಯಲಿರುವುದು.
ಡಿ. 15ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಹ ವಾಚನ , ಮಹಾಗಣಪತಿ ಹೋಮ, ಚಂಡಿಕಾಯಾಗದ ಪ್ರಾರಂಭ , ತೋರಣ ಮುಹೂರ್ತ , ಬಳಿಕ ಚಂಡಿಕಯಾಗದ ಪೂರ್ಣಹುತಿ, ಸುಹಾಸಿನಿ ಪೂಜೆ, ಶ್ರೀದೇವರಿಗೆ ಕಲಾಭಿಷೇಕ , ಹಸಿರುಹೊರೆ ಕಾಣಿಕೆ ಸಮರ್ಪಣೆ , ಮಹಾಪೂಜೆ ಪ್ರಸಾದ ವಿತರಣೆ , ಅನ್ನ ಸಂತರ್ಪಣೆ ರಾತ್ರಿ 7 ಗಂಟೆಗೆ ಶ್ರೀದೇವಿಗೆ ದೊಡ್ಡ ರಂಗಪೂಜೆ , ಮಹಾಪೂಜೆ, ರಾತ್ರಿ 8 ಗಂಟೆಗೆ ಶ್ರೀದೇವರ ಬಲಿ ಹೊರಟು ಉತ್ಸವ , ವಸಂತ ಕಟ್ಟೆ ಪೂಜೆ, ಬೆಡಿ ಪ್ರದರ್ಶನ, ಡಿ.16ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಕಲಶ ಪೂಜೆ ಬಳಿಕ ಶ್ರೀದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ , ಮಧ್ಯಾಹ್ನ – ಬಟ್ಟಲು ಕಾಣಿಕೆ , ಪ್ರಸಾದ ವಿತರಣೆ , ಬಳಿಕ ಶ್ರೀ ದೇವರಿಗೆ ಕಲಾಭಿಷೇಕ ಮಹಾಪೂಜೆ ವೈಧಿಕ ಮಂತ್ರಾಕ್ಷತೆ , ಪ್ರಸಾದ ವಿತರಣೆ ಅನ್ನ ಸಂತರ್ಪಣೆ ಸಾಯಂಕಾಲ ಕೇರ್ಪಡ ಗೌಡ ಮನೆತನ ಭಂಡಾರ ಮನೆಯಿಂದ ರಕ್ತೇಶ್ವರಿ ಮತ್ತು ಪರಿವಾರದೈವಗಳ ಭಂಡಾರ ದೇವಸ್ಥಾನಕ್ಕೆ ಬಂದು ಸಾಯಂಕಾಲ 6 ಗಂಟೆಗೆ ಬಳಿಕ ನೇಮೋತ್ಸವ ನಡೆಯಲಿರುವುದು . ಈ ಎಲ್ಲಾ ವೈಧಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದೇವಳದ ಪ್ರಕಟಣೆ ತಿಳಿಸಿದೆ.