ನಿವೃತ್ತ ಯೋಧ ಲಿಂಗಪ್ಪ ಗೌಡ ಮೇಲಡ್ತಲೆ ನಿಧನ

0

ಅರಂತೋಡು ಗ್ರಾಮದ ಮೇಲಡ್ತಲೆ ನಿವಾಸಿ, ನಿವೃತ್ತ ಯೋಧ ಲಿಂಗಪ್ಪ ಗೌಡ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಡಿ.11ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸಿದ ಲಿಂಗಪ್ಪ ಗೌಡರು ಕಳೆದ ಏಳು ವರ್ಷಗಳ ಹಿಂದೆ ಸೇನಾವೃತ್ತಿಯಿಂದ ನಿವೃತ್ತಿಗೊಂಡಿದ್ದರು. ಲಿಂಗಪ್ಪ ಗೌಡರನ್ನು ಇತ್ತೀಚೆಗೆ ಅರಂತೋಡು ಗ್ರಾಮ ಪಂಚಾಯತಿಯಲ್ಲಿ ನಡೆದ ಯೋಧ ನಮನ ಕಾರ್ಯಕ್ರಮದಲ್ಲಿ ಗುರುತಿಸಿ, ಸನ್ಮಾನಿಸಲಾಗಿತ್ತು.

ಮೃತರು ಪತ್ನಿ , ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.