ಕಲ್ಮಡ್ಕ ಮರಾಟಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಕಬಡ್ಡಿ ಪಂದ್ಯಾಟ

0

ಕಲ್ಮಡ್ಕ ಮರಾಟಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ 58ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ಡಿ. 10ರಂದು ನಡೆಯಿತು. ಸಂಜೆ ಸಂಘದ ಅಧ್ಯಕ್ಷ ರವಿಚಂದ್ರ ಕಾಚಿಲರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.

ಮುಖ್ಯ ಅತಿಥಿಯಾಗಿ ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ, ಕೆ.ಜೆ.ಯು. ಸುಳ್ಯ ಘಟಕದ ಅಧ್ಯಕ್ಷ ಈಶ್ವರ ವಾರಣಾಶಿ ಭಾಗವಹಿಸಿದ್ದರು. ಕಲ್ಮಡ್ಕ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಮೋಹಿನಿ ಲತೇಶ್, ಸದಸ್ಯರುಗಳಾದ ಶ್ರೀಮತಿ ಮೀನಾಕ್ಷಿ ಬೊಮ್ಮೆಟ್ಟಿ, ಹರೀಶ್ ಮಾಳಪ್ಪಮಕ್ಕಿ, ಶಾಲಾ ಕಲ್ಮಡ್ಕ ಸ.ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಹರೀಶ್ ಜೋಗಿಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಸ್ವಾತಿ ಸ್ವಾಗತಿಸಿ ಬಾಲಕೃಷ್ಣ ಬೊಮ್ಮೆಟ್ಟಿ ವಂದಿಸಿದರು. ಕು. ಪಲ್ಲವಿ ಕಾಚಿಲ ಕಾರ್ಯಕ್ರಮ ನಿರೂಪಿಸಿದರು.


ಕಬಡ್ಡಿ ಪಂದ್ಯಾಟದಲ್ಲಿ ಒಟ್ಟು 14. ತಂಡಗಳು ಭಾಗವಹಿಸಿ, ಹೆಚ್.ಎಂ.ಸಿ. ಕಲ್ಲಾಜೆ ಪ್ರಥಮ ಸ್ಥಾನ ಪಡೆದರೆ, ಕೆ.ಎಫ್.ಡಿ.ಸಿ. ಕಡಬ ದ್ವಿತೀಯ ಸ್ಥಾನ, ಶ್ರೀ ಶಾಂತಿ ಸಿದ್ಯಾಳ ತೃತೀಯ ಮತ್ತು ಯುವ ಸ್ಪೂರ್ತಿ ಕಲ್ಮಡ್ಕ ಚತುರ್ಥ ಸ್ಥಾನ ಪಡೆದುಕೊಂಡಿತು. ಹೆಚ್.ಎಂ.ಸಿ. ತಂಡದ ಜಿತೇಶ್ ಉತ್ತಮ ಹಿಡಿತಗಾರನಾಗಿ, ಸವ್ಯಸಾಚಿ ಆಟಗಾರನಾಗಿ ಪುನೀತ್ ಮತ್ತು ಉತ್ತಮ ದಾಳಿಗಾರನಾಗಿ ಕೆ.ಎಫ್‌.ಡಿ.ಸಿಯ ಪ್ರದೀಪ್ ವೈಯಕ್ತಿಕ ಬಹುಮಾನಗಳನ್ನು ಪಡೆದುಕೊಂಡರು.


ತ್ರೋಬಾಲ್ ಪಂದ್ಯಾಟದಲ್ಲಿ ಒಟ್ಟು 6 ತಂಡಗಳು ಭಾಗವಹಿಸಿ ಲಕ್ಷ್ಮೀ ನರಸಿಂಹ ಊಂತನಾಜೆ, ಬೆಳ್ತಂಗಡಿ ಪ್ರಥಮ, ಯುವ ಸ್ಪೂರ್ತಿ ಕಲ್ಮಡ್ಕ ದ್ವಿತೀಯ ಸ್ಥಾನ ಪಡೆದುಕೊಂಡವು. ಇದರೊಂದಿಗೆ ಸ್ಥಳೀಯರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು‌ ನಡೆಯಿತು.