ಎಣ್ಮೂರು : ಮಹಿಳೆ ನಾಪತ್ತೆ ಪೊಲೀಸ್ ದೂರು

0

ಎಣ್ಮೂರಿನಲ್ಲಿ ಮಹಿಳೆಯೋರ್ವರು ನಾಪತ್ತೆಯಾಗಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಎಣ್ಮೂರಿನ ಕಟ್ಟ ಕಾಲೊನಿ ನಿವಾಸಿ ರೇವತಿ ಎಂಬವರು ಡಿ.13 ರಂದು ಮನೆಯಿಂದ ನಿಂತಿಕಲ್ಲಿಗೆ ಹೋದವರು ವಾಪಾಸು ಮನೆಗೆ ಬಾರದೆ ಇದ್ದು ಈ ಬಗ್ಗೆ ಮಹಿಳೆಯ ಪತಿ ರಘುನಾಥ ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ದೂರಿನಲ್ಲಿ
ಪತ್ನಿ ರೇವತಿ,ಪ್ರಾಯ- 36 ವರ್ಷ ಎಂಬುವರು ಸುಮಾರು 12 ವರ್ಷಗಳಿಂದ ಎಣ್ಮೂರಿನ ಇಂಟರ್ಲಾಕ್ ಫ್ಯಾಕ್ಟರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದವರು ನಿನ್ನೆ ದಿನಾಂಕ 13.12.2023ರಂದು ಬೆಳಿಗ್ಗೆ ಸುಮಾರು 8.00 ಗಂಟೆಗೆ ನಿಂತಿಕಲ್ಲಿನಲ್ಲಿರುವ ಒಡಿಯೂರು ಸಹಕಾರಿ ಸಂಘದ ಕಚೇರಿಗೆ ಹಣ ಪಾವತಿಸಲೆಂದು ತಮ್ಮ ಮನೆಯಿಂದ ಹೊರಟು ಹೋಗಿದ್ದು ಆ ವೇಳೆ ಅವರ ಮಗಳಾದ ಮಲ್ಲಿಕಾ ಎಂಬವಳು ಕೂಡ ಅವರ ಜೊತೆಯಲ್ಲಿ ನಿಂತಿಕಲ್ಲು ಶಾಲೆಗೆಂದು ಹೊರಟು ಹೋಗಿರುತ್ತಾಳೆ. ಅವರಿಬ್ಬರು ಬೆಳಿಗ್ಗೆ ಸುಮಾರು 8.15 ಗಂಟೆಗೆ ನಿಂತಿಕಲ್ ತಲುಪಿದ ಬಳಿಕ ರೇವತಿಯು ತನ್ನ ಮನೆಯ ಕಪಾಟಿನ ಕೀ ಮತ್ತು 200 ರೂಪಾಯಿಗಳನ್ನು ಮಗಳಾದ ಮಲ್ಲಿಕಾಳಲ್ಲಿ ನೀಡಿ ಈ ದಿನ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ರಜೆ ಹಾಕಿರುವುದಾಗಿ ಹೇಳಿದ್ದು ಬಳಿಕ ಮಲ್ಲಿಕಾಳು ಅಲ್ಲಿಂದ ಶಾಲೆಗೆ ತೆರಳಿದ್ದಾಳೆ. ರಾತ್ರಿಯಾದರೂ ರೇವತಿ ತನ್ನ ಮನೆಗೆ ಹಿಂದಿರುಗಿ ಬಾರದೆ ಇದ್ದದ್ದರಿಂದ ತಮ್ಮ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಇಲ್ಲಿಯವರೆಗೆ ಪತ್ತೆಯಾಗದೆ ಕಾಣೆಯಾಗಿರುತ್ತಾಳೆ.ಆದುದರಿಂದ ಕಾಣೆಯಾದ ರೇವತಿಯನ್ನು ಪತ್ತೆ ಹಚ್ಚಿ ಕೊಡಬೇಕೆಂದು ದೂರಿನಲ್ಲಿ ವಿನಂತಿಸಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ ಹೆಸರು- ರೇವತಿ,ಪ್ರಾಯ-36 ವರ್ಷ, ವಿದ್ಯಾಭ್ಯಾಸ-ಇರುವುದಿಲ್ಲ,ಮಾತನಾಡುವ ಭಾಷೆ-ತುಳು,ಕನ್ನಡ ಮೈಕಟ್ಟು-ಸಾಧಾರಣ ಶರೀರ, ಮೈಬಣ್ಣ-ಎಣ್ಣೆ ಕಪ್ಪು ,ಎತ್ತರ- ಸುಮಾರು ಐದು ಅಡಿ ಆರು ಇಂಚು ಧರಿಸಿದ ಬಟ್ಟೆ- ಹಳದಿ ಬಣ್ಣದ ಚೂಡಿದಾರ್ ಟಾಪ್ ಮತ್ತು ಕೆಂಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.