ಐದನೇ ತರಗತಿ ಕಲಿಯುತ್ತಿರುವ ಪುಟ್ಟ ಬಾಲಕಿ ಸಂತೃಪ್ತಿ ರೈಗೆ ಬೇಕಾಗಿದೆ ನೆರವಿನ ಹಸ್ತ

0

ಎಲ್ಲಾ ಮಕ್ಕಳಂತೆ ಕಲಿಯುತ್ತ, ಹೆಜ್ಜೆ ಹಾಕುತ್ತಾ, ಅಕ್ಕಪಕ್ಕದ ಸಹಪಾಠಿಗಳೊಂದಿಗೆ ಆಟೋಟದಲ್ಲಿ ಭಾಗವಹಿಸಿ ನಕ್ಕುನಲಿದಾಡಬೇಕಾದ ಬರೀ 10 ವರ್ಷದ ಪುಟಾಣಿ ಬಾಲಕಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಬಳ್ಪ ಸಮೀಪದ ಬೇಂಗನಡ್ಕ ವಿಠಲನಿವಾಸ ಮನೆಯ ಸಂತೋಷ್ ಕುಮಾರ್ ಹಾಗೂ ಅನುಷಾ ರೈ ದಂಪತಿಯ ಪುತ್ರಿ ಸಂತೃಪ್ತಿ ರೈ ಕಳೆದ ಮೂರು ತಿಂಗಳಿನಿಂದ ರಕ್ತಕ್ಕೆ ಸಂಬಂಧಪಟ್ಟ ತೀವ್ರ ಕಾಯಿಲೆಯಿಂದ ಬಳಲುತ್ತಿದ್ದು ಮಂಗಳೂರಿನ ದೇರಳಕಟ್ಟೆಯಲ್ಲಿರುವ ಯೆನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಈಕೆ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಐದನೇ ತರಗತಿ ಕಲಿಯುತ್ತಿದ್ದು, ಕಳೆದ 2 ತಿಂಗಳಿಂದ ಕೀಮೋಥೆರಪಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ, ಚಿಕಿತ್ಸೆಗೆ ಈಗಾಗಲೇ 5 ಲಕ್ಷವರೆಗೆ ಖರ್ಚಾಗಿದ್ದು, ಇದೀಗ ಈ ಕಾಯಿಲೆಗೆ Cone Marrow Trawsplant ಚಿಕಿತ್ಸೆಯನ್ನು ಅವಶ್ಯಕವಾಗಿ ಮಾಡಬೇಕೆಂದು ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ರಾಜೇಶ್ ಕೃಷ್ಣರವರು ತಿಳಿಸಿದ್ದು, ಇದಕ್ಕೆ ೨೫ ಲಕ್ಷದ ವರೆಗೆ ವೆಚ್ಚ ತಗಲಬಹುದೆಂದು ತಿಳಿಸಿದ್ದಾರೆ.
ಇದೀಗ ಸಂತೃಪ್ತಿ ರೈಯ ಹೆತ್ತವರು ಹಣವಿಲ್ಲದೆ ಅಸಹಾಯಕರಾಗಿದ್ದಾರೆ. ಕಡು ಬಡತನದಲ್ಲಿ ದುಡಿತು ಜೀವನ ಮಾಡುತ್ತಿರುವ ಈ ಕುಟುಂಬ ಆಸ್ಪತ್ರೆ ಚಿಕಿತ್ಸಾ ವೆಚ್ಚ ಭರಿಸಲಾಗದೆ ದಾನಿಗಳು ಹಾಗೂ ಸಂಘ-ಸಂಸ್ಥೆಗಳಿಂದ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಸಹಾಯ ಮಾಡಲು ಇಚ್ಛಿಸುವವರು Name: Anusha Rai M , A/c. 4031101000286
, IFSC : CNRB0004031 , Mobile: 9901316493 ಇದಕ್ಕೆ ಜಮೆ ಮಾಡಬಹುದು ಎಂದು ಮನವಿ ಮಾಡಿದ್ದಾರೆ.