ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾಸ್ಟರ್ ಪ್ಲಾನ್ ಕಾಮಗಾರಿ

0

ರಾಜ್ಯದ ನಂಬರ್ ಒನ್ ಮುಜರಾಯಿ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಮಾಸ್ಟರ್ ಪ್ಲಾನ್ ಕಾಮಗಾರಿ ಪ್ರಜಾರ ನಡೆದ ಮರಗಳು ಫಲ ನೀಡಿದೆ, ನೇರಲು ನೀಡಲಾರಂಭಿಸಿವೆ.

ಹಳೆ ರಸ್ತೆಯನ್ನು ತೆಗೆದು 2 ಪಥದ ಸುಮಾರು 18 ಮೀಟರ್ ಅಗಲದ ರಸ್ತೆ ಮತ್ತು ನಡುವಿನಲ್ಲಿ 1 ಮೀಟರ್ ವಿಭಾಜಕ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ 3 ಮೀಟರ್ ಫುಟ್ಪಾತ್ ಮತ್ತು ಯುಟಿಲಿಟಿ ಲೈನ್ ಸೇರಿ ಅಂದಾಜು 25 ಮೀಟರ್ ಅಗಲವಾದ ರಸ್ತೆ ನಿರ್ಮಾಣವಾಗಿದೆ.

ಹಳೆಯ ಮರಗಳೆಲ್ಲ ಕಡಿಯಲ್ಪಟ್ಟು ಕುಕ್ಕೆ ಸುಬ್ರಹ್ಮಣ್ಯ ಬಿಸಿಲಿನ ತಾಪ ಹೆಚ್ಚಾಗಿತ್ತು ಇದರಿಂದ ಕುಮಾರಧಾರ ಸ್ನಾನಘಟ್ಟದಿಂದ ನಡೆದು ಬರುವ ಭಕ್ತಾದಿಗಳಿಗೆ ಹಾಗು ಇಲ್ಲಿನ ನಾಗ ಸಂಚಾರ ಸೇರಿದಂತೆ ಪ್ರಾಣಿ ಪಕ್ಷಿಗಳಿಗೆ ನೆರಳು ಆಶ್ರಯ ಇಲ್ಲದಾಯಿತು. ಆ ಪ್ರಯುಕ್ತ ಆಡಳಿತ ಮಂಡಳಿ ನಿರ್ದಾರದಂತೆ ದೇವಾಲಯಕ್ಕೆ ಬರುವ ಪ್ರಮುಖ ಅತಿಥಿಗಳಿಂದ ಅಂದರೆ ರಾಜ್ಯಪಾಲರು, ರಾಜಕೀಯ ಮುಖಂಡರು, ಚಿತ್ರನಟರು, ನ್ಯಾಯಾಧೀಶರುಗಳು, ಸ್ವಾಮೀಜಿಗಳು ಸೇರಿದಂತೆ ಗಣ್ಯರಿಂದ ಗಿಡ ನೆಡಿಸುವ ಕಾರ್ಯಕ್ರವನ್ನು ಮಾಡಿದರು. ವರ್ಷದಲ್ಲಿ 2 ಬಾರಿ ಗೊಬ್ಬರ ಹಾಗೂ ಬೇಸಿಗೆ ಸಮಯದಲ್ಲಿ ವಾರಕ್ಕೆ 2 ಬಾರಿ ನೀರು ಹಾಕಿ ಚೆನ್ನಾಗಿ ಆರೈಕೆ ಮಾಡಲಾಗಿದೆ.


ಅಷ್ಟೇ ಚೆನ್ನಾಗಿ ಆರೈಕೆ ಮಾಡಿರುವ ಪರಿಣಾಮವಾಗಿ ಈಗ ಸುಮಾರು 800ಕ್ಕೂ ಅಧಿಕ ಗಿಡಗಳು ಸಣ್ಣ ಸಣ್ಣ ಮರಗಳಾಗಿ ಎದ್ದು ನಿಂತಿವೆ. ಈ ವರ್ಷದಿಂದ ಕೆಲವು ಗಿಡಗಳು ಹಲಸು ಮತ್ತಿತರ ಗಿಡಗಳು ಫಲ ಕೊಡಲು ಶುರು ಮಾಡಿದೆ. ನಾಗನ ಕ್ಷೇತ್ರವನ್ನು ಹಸಿರೀಕರಣ ಮಾಡುವ ನಿಟ್ಟಿನಲ್ಲಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಈ ಕಾರ್ಯ ಭಕ್ತಾದಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಈ ಕಾರ್ಯ ಮತ್ತೆ ಹಿಂದಿ‌ ಗತ ವೈಭವ ಸೌಂದರ್ಯಕ್ಕೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಪಾತ್ರವಾಗಲಿ ಎಂಬ ಆಶಯ ಭಕ್ತರದ್ದು.