ಇಂದು ಆಲೆಟ್ಟಿ ಸಹಕಾರಿ ಸಂಘಕ್ಕೆ ಚುನಾವಣೆ-ಬಿರುಸಿನ ಮತದಾನ

0

ಮಧ್ಯಾಹ್ನಕ್ಕೆ
ಶೇ .65% ಮತದಾನ,ಇಂದು ಸಂಜೆ ಫಲಿತಾಂಶ

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಇಂದು ಚುನಾವಣೆ ನಡೆಯುತ್ತಿದ್ದು ಬೆಳಗ್ಗಿನಿಂದ ಮತದಾನ ಪ್ರಕ್ರಿಯೆ ಆರಂಭಗೊಂಡು ಮಧ್ಯಾಹ್ನದ ವೇಳೆಗೆ
ಶೇ.65% ಮತದಾನ ನಡೆದಿದೆ.
ಬೆಳಗ್ಗಿನಿಂದಲೇ ಬಿರುಸಿನ ಮತದಾನ ಪ್ರಕ್ರಿಯೆ ನಡೆಯುತ್ತಿದೆ‌. ಇತ್ತಂಡಗಳ ಅಭ್ಯರ್ಥಿಗಳ ಮಧ್ಯೆ ನೇರ ಸ್ಪರ್ಧೆ ನಡೆಯಲಿದೆ.

ಒಟ್ಟು ‌24 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು ಇಂದು ಸಂಜೆ ಫಲಿತಾಂಶ ಹೊರಬೀಳಲಿರುವುದು.

ಬಿಜೆಪಿ ಬೆಂಬಲಿತ 12 ಮಂದಿ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ‌ಬೆಂಬಲಿತ ಅಭ್ಯರ್ಥಿಗಳು 12 ಮಂದಿ ಕಣದಲ್ಲಿದ್ದಾರೆ.
ಒಟ್ಟು 1237 ಮತದಾರರಿದ್ದು ಈಗಾಗಲೇ 777 ಮತದಾರರು ಮತ ಚಲಾವಣೆ ಮಾಡಿರುವುದಾಗಿ ತಿಳಿದು ದಿದೆ.