ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಪ್ರಯುಕ್ತ ಪಂಚಮಿಯ ದಿನವಾದ ಡಿ.17 ರಾತ್ರಿ ಶ್ರದ್ಧಾ ಭಕ್ತಿಯ ಪಂಚಮಿ ರಥೋತ್ಸವ ನೆರವೇರಿತು.
ಪಂಚಮಿಯಂದು ಪಂಚಮಿ ರಥದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ನಡೆಯಿತು. ಜಗಮಗಿಸುವ ವಿದ್ಯುದ್ದೀಪಾಲಂಕಾರದ ನಡುವೆ ಶ್ರೀ ಸ್ವಾಮಿಯ ವೈಭವದ ರಥೋತ್ಸವ ನೆರವೇರಿತು. ಸಹಸ್ರಾರು ಭಕ್ತರು ಶ್ರೀ ದೇವರ ಉತ್ಸವವನ್ನು ವೀಕ್ಷಿಸಿದರು.
ರಾತ್ರಿ ಮಹಾಪೂಜೆಯ ಬಳಿಕ ಹೊರಾಂಗಣ ಉತ್ಸವ ಆರಂಭವಾಯಿತು. ವಿಶೇಷ ಹೂವಿನ ಅಲಂಕಾರದೊಂದಿಗೆ ರಾರಾಜಿಸುತ್ತಿದ್ದ ಪಾಲಕಿಯಲ್ಲಿ ಶ್ರೀ ದೇವರ ಉತ್ಸವ ಮತ್ತು ಬಂಡಿ ಉತ್ಸವ ದೇವಳದ ಹೊರಾಂಗಣದಲ್ಲಿ ನೆರವೇರಿತು. ಸಂಗೀತ, ಮಂಗಳವಾದ್ಯ, ಸ್ಯಾಕ್ಸೋಪೋನ್, ಬ್ಯಾಂಡ್‌ಗಳ ಸುಮಧುರ ಸುತ್ತುಗಳ ಉತ್ಸವದ ನಂತರ ರಥೋತ್ಸವ ನಡೆಯಿತು. ಬಳಿಕ ಸವಾರಿ ಕಟ್ಟೆಯಲ್ಲಿ ಕಟ್ಟೆ ಪೂಜೆ ನೆರವೇರಿತು.ಈ ಸಂದರ್ಭದಲ್ಲಿ ಆಕರ್ಷಣೀಯ ಕುಕ್ಕೆಬೆಡಿ ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿತು.
ಈ ಸಂದರ್ಭದಲ್ಲಿ ಸುಳ್ಯ ದ ಶಾಸಕಿ ಕುl ಭಾಗೀರಥಿ ಮುರುಳ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮೋಹನ್ ರಾಂ ಸುಳ್ಳಿ, ಪುತ್ತೂರು ಸಹಾಯಕ ನಿರ್ದೇಶಕ ಗಿರೀಶ್ ನಂದನ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನದರ್ಬೆ, ಪಿ.ಜಿ.ಎಸ್.ಎನ್.ಪ್ರಸಾದ್, ಮನೋಹರ ರೈ, ಶ್ರೀವತ್ಸಾ, ಕಡಬ, ಲೊಕೇಶ್ ಮುಂಡೊಕಜೆ, ವನಜಾ.ವಿ.ಭಟ್, ಶೋಬಾ ಗಿರಿಧರ್ ಸೇರಿದಂತೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರು, ದೇವಳದ ಸಿಬ್ಬಂದಿಗಳು ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.