ಕನಕಮಜಲು: ಕುದ್ಕುಳಿ ಪರಿಸರದಲ್ಲಿ ಕೃಷಿ ತೋಟಕ್ಕೆ ಒಂಟಿ ಸಲಗ ದಾಳಿ

0

ಕಾಡಾನೆ ದಾಂದಲೆಯಿಂದ ಅಪಾರ ಕೃಷಿ ಬೆಳೆ ನಾಶ

ಬೆಳ್ಳಿಪ್ಪಾಡಿ, ಮುರೂರು ಭಾಗದಲ್ಲಿ ನಿರಂತರವಾಗಿ ಕೃಷಿಕರ ನಿದ್ದೆಗೆಡಿಸುತ್ತಿದ್ದ ಕಾಡಾನೆಗಳು ಡಿ.17ರಂದು ರಾತ್ರಿ ಕನಕಮಜಲು ಗ್ರಾಮದ ಕುದ್ಕುಳಿ ಪರಿಸರದಲ್ಲಿ ಕೃಷಿಕರ ತೋಟಕ್ಕೆ ದಾಳಿ ನಡೆಸಿ, ಅಡಿಕೆ ಗಿಡ, ತೆಂಗಿನ ಗಿಡ, ಬಾಳೆಗಿಡಕ್ಕೆ ಹಾನಿ ಮಾಡಿದ್ದು, ಅಪಾರ ಪ್ರಮಾಣದಲ್ಲಿ ಕೃಷಿ ನಾಶಗೊಳಿಸಿದೆ.

ಕನಕಮಜಲು ಗ್ರಾಮದ ಲೋಹಿತ್ ಕುಮಾರ್ ಕುದ್ಕುಳಿ, ಸುರೇಶ್ ಕುದ್ಕುಳಿ, ಶ್ರೀಧರ ಕುದ್ಕುಳಿ ಸೇರಿದಂತೆ ಆ ಪರಿಸರದ ಕೃಷಿಕರ ತೋಟಗಳಿಗೆ ರಾತ್ರಿಯ ವೇಳೆ ಒಂಟಿಸಲಗವೊಂದು ದಾಳಿ ನಡೆಸಿದ್ದು ಅಪಾರ ಕೃಷಿ ಹಾನಿಗೊಳಿಸಿದೆ.

ಕನಕಮಜಲು ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಯಳಿ ಅವರ ಕೃಷಿ ತೋಟದಲ್ಲಿ ಐದು ತೆಂಗಿನ ಗಿಡ, ಸುಮಾರು ಇಪ್ಪತ್ತಕ್ಕೂ ಅಧಿಕ ಬಾಳೆ ಕೃಷಿಯನ್ನು ಹಾನಿಗೊಳಿಸಿದ್ದು, ಸುರೇಶ್ ಕುದ್ಕುಳಿ ಅವರ ಕೃಷಿ ತೋಟದಲ್ಲಿ ಐದಕ್ಕೂ ಅಧಿಕ ತೆಂಗಿನ ಗಿಡ, ಹತ್ತಕ್ಕೂ ಅಧಿಕ ಬಾಳೆ ಗಿಡಕ್ಕೆ ಹಾನಿಗೊಳಿಸಿದ್ದು, ಶ್ರೀಧರ ಕುದ್ಕುಳಿ ಹಾಗೂ ಗುಡ್ಡಪ್ಪ ಗೌಡ ಕುದ್ಕುಳಿ ಅವರ ತೋಟದಲ್ಲೂ ಕೃಷಿ ನಾಶ ಪಡಿಸಿರುವುದಾಗಿ ತಿಳಿದುಬಂದಿದೆ.