ಹಾಲೆಮಜಲು ಶಾಲೆಯಲ್ಲಿ ಶೌಚಾಲಯಕ್ಕೆ ಗುದ್ದಲಿ ಪೂಜೆ

0

ಗುತ್ತಿಗಾರು ಗ್ರಾಮದ ಹಾಲೆಮಜಲು ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುವ ಶೌಚಾಲಯಕ್ಕೆ ಗುದ್ದಲಿ ಪೂಜೆ ನಡೆಯಿತು.
ಗ್ರಾಮ ಪಂಚಾಯತ್ ಅದ್ಯಕ್ಷೆ ಸುಮಿತ್ರ ಮೂಕಮಲೆ ಗುದ್ದಲಿಪೂಜೆ ನೆರವೇರಿಸಿದರು.


ವಾರ್ಡ್ ಸದಸ್ಯ ವಿನಯಕುಮಾರ್ ಸಾಲ್ತಾಡಿ ದೀಪ ಬೆಳಗಿಸಿದರು. ಪಂಚಾಯತ್ ಸದಸ್ಯರಾದ ವೆಂಕಟ್ ವಳಲಂಬೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೇಶವ ಭಟ್ ಮುಳಿಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ, ಗ್ರಾ.ಪಂ ಉಪಾಧ್ಯಕ್ಷೆ ಭಾರತಿ ಸಾಲ್ತಾಡಿ. ಸದಸ್ಯರಾದ ಅನಿತಾ ರಮಾನಂದ ಮೆಟ್ಟಿನಡ್ಕ, ಮಂಜುಳ ಮುತ್ಲಾಜೆ. ಪಂಚಾಯತ್ ಮಾಜಿ ಸದಸ್ಯ ರಾಕೇಶ್ ಮೆಟ್ಟಿನಡ್ಕ. ಶಾಲಾಭಿವೃದ್ದಿ ಅದ್ಯಕ್ಷರಾದ ಪವಿತ್ರ ಕುಕ್ಕುಜೆ. ಶಾಲಾಭಿವೃದ್ದಿ ಮಾಜಿ ಅಧ್ಯಕ್ಷ ರಾದ ಮೋಹನ್ ಎರ್ದಡ್ಕ. ಹರಿಶ್ಚಂದ್ರ ಕುಳ್ಳಂಪ್ಪಾಡಿ. ಹಳೆ ವಿಧ್ಯಾರ್ಥಿ ಸಂಘದ ಅದ್ಯಕ್ಷರು ದುಗ್ಗಪ್ಪ ಮಾಸ್ತರ್ ಕುಳ್ಳಂಪ್ಪಾಡಿ, ಆದರ್ಶ ಯೂತ್ ಕ್ಲಬ್ ಅಧ್ಯಕ್ಷರಾದ ಸತೀಶ್ ಬಂಬುಳಿ, ಧರ್ಮಸ್ಥಳ ಶೌರ್ಯ ತಂಡದ ಲೋಹಿತ್ ಕಾರ್ತಿಕ್ , ಹಿರಿಯರಾದ ಶೇಷಪ್ಪ ಗೌಡ ಹಾಲೆಮಜಲು, ಕಂಟ್ರಾಕ್ಟರ್ ನವೀನ್ ಸುಳ್ಳಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ಜಯಂತಿ ಸ್ವಾಗತಿಸಿ ವಂದಿಸಿದರು. ಸಹಶಿಕ್ಷಕಿ ಲತಾಶ್ರೀ ಸಹಕರಿಸಿದರು.