ಅಧಿಜಾರಿಗಳೊಂದಿಗೆ ಶಾಸಕರ ಸಭೆ
ಕೋವಿಡ್ ತಡೆಗೆ ತಾಲೂಕಿನ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಸುಳ್ಯ ಶಾಸಕರು ಆರೋಗ್ಯ ಇಲಾಖೆ ಹಾಗೂ ಪೋಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ಇಂದು ತಾಲೂಕು ಪಂಚಾಯತ್‌ನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೋಲೀಸ್ ಅಧಿಕಾರಿಗಳೊಂದಿಗೆ ಶಾಸಕರು ಸಭೆ ನಡೆಸಿದರು.
ಸುಳ್ಯ ಕೇರಳಕ್ಕೆ ತಾಗಿಕೊಂಡಿರುವುದರಿಂದ ಹೆಚ್ಚಿನ ನಿಗಾ ವಹಿಸಬೇಕು. ಮುರೂರು ಸೇರಿದಂತೆ ಇನ್ನಿತರ ಗಡಿ ಭಾಗದಲ್ಲಿಯೂ ಕೇರಳದಿಂದ ಈ ಕಡೆಗೆ ಬರುವವರ ತಪಾಸಣೆ ನಡೆಸಬೇಕು. ೨೪*೭ ಸಿಬ್ಬಂದಿಗಳು ಕಾರ್ಯ ನಿರ್ವಹಿಸಬೇಕು ಎಂದು ಅವರು ಸೂZನೆ ನೀಡಿದರಲ್ಲದೆ, ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್, ಬೆಡ್ ಅಗತ್ಯತೆಗಳ ಕುರಿತು ಅವರು ವಿವರ ಪಡೆದುಕೊಂಡರು.
ಕೆಲವು ಚೆಕ್ ಪೋಸ್ಟ್‌ಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವ ಕುರಿತು ಅಧಿಕಾರಿಗಳು ಶಾಸಕರ ಗಮನೆ ಸೆಳೆದಾಗ, ಶೌಚಾಲಕ ಕಟ್ಟುವ ಕುರಿತು ಅವರು ಭರವಸೆ ನೀಡಿದರೆಂದು ತಿಳಿದು ಬಂದಿದೆ.
ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಅಭಿಷೇಕ್, ಇ.ಒ. ರಾಜಣ್ಣ, ನ.ಪಂ. ಮುಖ್ಯಾಧಿಕಾರಿ ಸುಧಾಕರ್, ಆರೋಗ್ಯ ಇಲಾಖೆ ಪ್ರವೀಳಾ, ಎಸ್.ಐ. ಈರಯ್ಯ ದೂಂತೂರು, ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ ಮೊದಲಾದವರು ಇದ್ದರು.