ಕೆ.ವಿ.ಜಿ. ಶಿಕ್ಷಣ ಸಂಸ್ಥೆಗಳ ಕಮಿಟಿ ‘ಬಿ’ ಪರವಾಗಿ ಸುಳ್ಯ ಸಿವಿಲ್ ಪ್ರಕರಣದಲ್ಲಿ ನ್ಯಾಯಾಲಯದ ಮಹತ್ವದ ಮಧ್ಯಂತರ ಆದೇಶ

0

ಅಕಾಡೆಮಿ ಅಫ್ ಲಿಬರಲ್ ಎಜ್ಯುಕೇಶನ್ (ರಿ.) ಸಂಸ್ಥೆಯ ಅಧ್ಯಕ್ಷರು ಕಾನೂನು ಬಾಹಿರವಾಗಿ ಕೆ.ವಿ.ಜಿ. ‘ಎ’ ಕಮಿಟಿ ಮತ್ತು ‘ಬಿ’ ಕಮಿಟಿಯನ್ನು ವಿಲೀನಗೊಳಿಸಿ ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡಿರುವುದಾಗಿಯೂ, ಕಮಿಟಿ ‘ಬಿ’ಯು ನಡೆಸುತ್ತಿದ್ದ ಬ್ಯಾಂಕ್ ವ್ಯವಹಾರವನ್ನು ಕಾನೂನು ಬಾಹಿರವಾಗಿ ಸ್ಥಗಿತಗೊಳಿಸಿರುವುದಾಗಿಯೂ ಡಾ. ಜ್ಯೋತಿ ಆರ್. ಪ್ರಸಾದ್‌ರವರು, ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ OS/12/2021ರ ದಾವೆಯಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು.

ಸುಳ್ಯ ನ್ಯಾಯಾಲಯವು ಸದ್ರಿ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿತ್ತು. ದಿನಾಂಕ 21.12.2023 ರಂದು ನ್ಯಾಲಯವು ಮಧ್ಯಂತರ ಆದೇಶ ನೀಡಿದ್ದು, ಎ ಮತ್ತು ಬಿ ಗ್ರೂಪ್ ಗಳನ್ನು ವಿಲೀನಗೊಳಿಸಿದ ನಿರ್ಣಯಗಳಿಗೆ ಈ ವ್ಯಾಜ್ಯ ತೀರ್ಮಾನವಾಗುವವರೆಗೆ ತಡೆ ನೀಡಿರುವುದಾಗಿ ತಿಳಿದುಬಂದಿದೆ.

ಆದುದರಿಂದ ಕುರುಂಜಿ ವೆಂಕಟ್ರಮಣ ಗೌಡರು ಮಾಡಿದ ತೀರ್ಮಾನದಂತೆ (MOU ಪ್ರಕಾರ) ಕಮಿಟಿ ‘ಎ’ ಮತ್ತು ಕಮಿಟಿ ‘ಬಿ’ ಯು ಯಥಾಸ್ಥಿತಿಯಲ್ಲಿ ಅಸ್ಥಿತ್ವದಲ್ಲಿರುವುದು ಮತ್ತು ಕಮಿಟಿ ‘ಬಿ’ ಯು ಬ್ಯಾಂಕ್ ವ್ಯವಹಾರವನ್ನು ಮೊದಲಿನಂತೆ ನಿರ್ವಹಿಸಲು ಸ್ವತಂತ್ರವಾಗಿರುತ್ತದೆ ಎಂದು ಡಾ.ಜ್ಯೋತಿ ರೇಣುಕಾಪ್ರಸಾದ್ ತಿಳಿಸಿದ್ದಾರೆ.