ವಿದ್ಯಾಮಾತ ಅಕಾಡೆಮಿಯು ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಪೋಲಿಸ್ ಸಬ್ ಇನ್ಸ್ ಪೆಕ್ಟರ್ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೀಗೆ ಹಲವು ಸ್ಪರ್ದಾತ್ಮಕ ಪರೀಕ್ಷೆಯ ಪೂರ್ವ ತಯಾರಿಯಲ್ಲಿರುವವರಿಗೆ ಪ್ರೇರಣೆ ನೀಡುವ ಸಲುವಾಗಿ ಸ್ಪರ್ದಾತ್ಮಕ ಪರೀಕ್ಷೆಗಳ ಸಾಮಾನ್ಯ ಜ್ಞಾನ ಪರೀಕ್ಷಾ ಸ್ಪರ್ಧೆ ಏರ್ಪಡಿಸಲಾಗಿತ್ತು ಹಾಗೂ ನಗದು ಬಹುಮಾನ ವನ್ನು ಕೂಡ ಘೋಷಿಸಲಾಗಿತ್ತು.
ಪರೀಕ್ಷಗೆ ಸುಮಾರು ಒಂದು ಸಾವಿರ ಅಭ್ಯರ್ಥಿ ಗಳು ಭಾಗವಹಿಸಿದ್ದು ,ಅದರ ಫಲಿತಾಂಶವು ಪ್ರಕಟಗೊಂಡಿರುತ್ತದೆ.ಸ್ಪರ್ದಾತ್ಮಕ ಪರೀಕ್ಷೆಯ ಮೊದಲ ನಗದು ಬಹುಮಾನವಾದ ಐವತ್ತು ಸಾವಿರ ರೂಪಾಯಿಯು ಬೆಳ್ಳಾರೆ ಪೋಲಿಸ್ ಠಾಣೆಯ ಕಾನ್ಸ್ಟೇಬಲ್ ಬಸವರಾಜ್ ಹಾಗೂ ದ್ವಿತೀಯ ಬಹುಮಾನದ ನಗದು ಇಪ್ಪತ್ತೈದು ಸಾವಿರ ರೂಪಾಯಿಯನ್ನು ಬೆಳ್ಳಾರೆ ಠಾಣೆಯ ಕಾನ್ಸ್ಟೇಬಲ್ ಹಾಲೇಶ್ ಅವರು ಪಡೆದುಕೊಂಡಿರುತ್ತಾರೆ.ಇವರಿಬ್ಬರೂ ಕೂಡ ಮುಂದೆ ನಡೆಯುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆ ಯನ್ನು ಬರೆಯಲಿದ್ದಾರೆ.
ಮಾನವೀಯತೆಗೆ ಸಾಕ್ಷಿಯಾದ ಬೆಳ್ಳಾರೆ ಠಾಣೆಯ ಸಿಬ್ಬಂದಿಗಳು ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ನಗದು ಬಹುಮಾನವನ್ನು ಪಡೆದ ಮೊತ್ತದಲ್ಲಿ ಪೋಲಿಸ್ ಅಧಿಕಾರಿಗಳ ಸಮ್ಮುಖದಲ್ಲೇ ಬಸವರಾಜ್ ಹತ್ತುಸಾವಿರ ಹಾಗೂ ಹಾಲೇಶ್ ಐದುಸಾವಿರ ರೂವನ್ನು ಬಡಮಕ್ಕಳ ವಿದ್ಯಾರ್ಥಿ ಗಳ ಶಿಕ್ಷಣಕ್ಕೆ ನೀಡಿ ಪ್ರೋತ್ಸಾಹಿಸಿ ಮಾನವೀಯತೆಗೆ ಸಾಕ್ಷಿಯಾದರು.
ಪುತ್ತೂರು ಅಬಕಾರಿ ಡಿವೈಎಸ್ಪಿ ಅಶೋಕ್ ಪೂಜಾರಿ , ಪುತ್ತೂರು ನಗರ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ, ವಿದ್ಯಾಮಾತ ಅಕಾಡೆಮಿ ಅಧ್ಯಕ್ಷ ಭಾಗೇಶ್ ರೈ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಜರುಗಿತು.