ಸುಳ್ಯದ ಎನ್.ಎಂ.ಸಿ. ಪ.ಪೂ. ಕಾಲೇಜಿನ ವಾರ್ಷಿಕೋತ್ಸವ ಡಿ. 24ರಂದು ನಡೆಯಿತು. ಲೇಖಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ. ನಾರಾಯಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಓ.ಎಲ್.ಇ. ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ ವಹಿಸಿದ್ದರು. ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಕಾಲೇಜಿನ ಶೈಕ್ಷಣಿಕ ಸಲಹೆಗಾರ ಚಂದ್ರಶೇಖರ ಪೇರಾಲ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಪ್ರಾಚಾರ್ಯರಾದ ಮಿಥಾ ಲಿ. ಪಿ ರೈ, ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಅಕ್ಷಯ್ ರೈ, ಆಜ್ಞಾ ಐಪಲ್, ಅಬ್ದುಲ್ ರೌಫ್, ಮನೋಜ್ ಎಸ್ ಆರ್ , ಅಂಬಿಕಾ ಕೆ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ
ಅಭಿಜ್ಞ ಎನ್.ಎಂ ಪ್ರಾರ್ಥಿಸಿ ವಿದ್ಯಾರ್ಥಿ ನಾಯಕ ಅಕ್ಷಯ್ ರೈ ಸ್ವಾಗತಿಸಿದರು. ಪ್ರಾoಶುಪಾಲೆ ಮಿಥಾಲಿ ಪಿ ರೈ ವಾರ್ಷಿಕ ವರದಿ ವಾಚಿಸಿದರು.ಉಪನ್ಯಾಸಕಿ ನಯನ ಎಂ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ದತ್ತಿನಿಧಿ, ಶೈಕ್ಷಣಿಕ ಸಾಧಕರ ಪಟ್ಟಿಯನ್ನು ವಿದ್ಯಾರ್ಥಿ ಕ್ಷೇಮಾಧಿಕಾರಿ ರೇಷ್ಮಾ ಎಂ ಎಂ, ಸಂದೇಶ ಪತ್ರ, ಕ್ರೀಡಾ ಸಾಧಕರ ಪಟ್ಟಿಯನ್ನು ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ, ಸಾಂಸ್ಕೃತಿಕ, ಕ್ರೀಡಾ ವಿಜೇತರ ಪಟ್ಟಿಯನ್ನು ಉಪನ್ಯಾಸಕ ವಿನಯ ಎನ್.ಬಿ ವಾಚಿಸಿದರು. ವಿದ್ಯಾರ್ಥಿ ನಾಯಕಿ ಆಜ್ಞ ಐಪಲ್ ವಂದಿಸಿ, ವಿದ್ಯಾರ್ಥಿಗಳಾದ ಪಿ.ಆರ್ ಸ್ಮಿತಾ, ಕೃತ ಸ್ವರ ದೀಪ್ತ ಕೆ ಕಾರ್ಯಕ್ರಮ ನಿರೂಪಿಸಿದರು.
ನಾವು ಗುರಿ ಇಟ್ಟುಕೊಂಡು ಮುನ್ನಡೆದರೆ ಯಶಸ್ಸು ಖಂಡಿತ ಲಭಿಸುತ್ತದೆ. ಒಳ್ಳೆಯ ಯೋಚನೆಗಳನ್ನು ಮಾಡಬೇಕು. ನಮ್ಮ ನಡೆ ನುಡಿ ಉತ್ತಮವಾಗಿರಬೇಕು. ಡಾ. ಕುರುಂಜಿಯವರೇ ನಮಗೆ ಮಾದರಿಯಾಗಿದ್ದಾರೆ – ನಾರಾಯಣ ಭಟ್
ಕಷ್ಟಪಟ್ಟು ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಯಾವ ಸಾಧನೆಯನ್ನೂ ಮಾಡಬಹುದು. ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಿ. ಯಾರಿಗೂ ಕೀಳರಿಮೆ, ಹಿಂಜರಿಕೆ ಬೇಡ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ – ಶ್ರೀಮತಿ ಶೋಭ ಚಿದಾನಂದ
ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸಿ. ಮುಂದಿನ ಔದ್ಯೋಗಿಕ ಬದುಕಿನಲ್ಲಿ ಆಂಗ್ಲಭಾಷೆಯೂ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಆಂಗ್ಲ ಭಾಷೆಯನ್ನೂ ಹಿಂಜರಿಕೆಯಿಲ್ಲದೆ ಮಾತನಾಡುವುದಕ್ಕೆ ಅಭ್ಯಾಸ ಮಾಡಿ – ಅಕ್ಷಯ್ ಕೆ.ಸಿ.