ಪಂಜ :ಜೇಸಿ ಸಪ್ತಾಹ-2023

0

ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ 2023ರ ಪ್ರಯುಕ್ತ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕ್ರೀಡೋತ್ಸವವು ಡಿ.24 ರಂದು ನಡೆಯಿತು.

ಪ್ರಗತಿಪರ ಕೃಷಿಕ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ಜೇಸಿಐ ಪಂಜ ಪಂಚಶ್ರೀ ನಿರಂತರವಾಗಿ ಸಮಾಜಕ್ಕೆ ಉತ್ತಮ ನಾಯಕರನ್ನು ನೀಡುತ್ತಿದೆ. ಸುಸಂಸ್ಕೃತ ಊರು ನಿರ್ಮಾಣಕ್ಕೆ ಇದುವೇ ಕಾರಣ. ಎಲ್ಲರನ್ನು ಒಗ್ಗೂಡಿಸಿ ಬೆರೆಯಲು ಕ್ರೀಡಾ ಕೂಟಗಳು ಅವಶ್ಯ”. ಎಂದು ಅವರು ಹೇಳಿದರು.

ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ವಹಿಸಿದ್ದರು.

ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಿ, ಅತ್ಯುತ್ತಮ ಕ್ರೀಡಾ ಸಂಘಟಕರಾಗಿ, ಜೇಸಿಐ ಪಂಜ ಪಂಚಶ್ರೀ ಸ್ಥಾಪಕ ಸದಸ್ಯ, ಕೆಸರು ಗದ್ದೆ ತಾಲೂಕಿಗೆ ಮೊದಲ ಬಾರಿಗೆ ಪರಿಚಯಿಸಿದ, ರಾಜ್ಯ ಮಟ್ಟದ ಕೆಸರು ಗದ್ದೆಯಲ್ಲಿ ಚಾಂಪಿಯನ್, ಕೂತ್ಕುಂಜ ಯುವಕ ಮಂಡಲದ ಸ್ಥಾಪಕಾಧ್ಯಕ್ಷ, ಪಂಜ ಕೋಟಿ ಚೆನ್ನಯ ಕ್ರೀಡಾಂಗಣ ನಿರ್ಮಾಣ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿ ಕೊಂಡ,ಸಮಾಜಮುಖಿ ಸಂಘಟನೆಯಲ್ಲಿ
ತೊಡಗಿಸಿಕೊಂಡಿರುವ,ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯೋಗಿಶ್ ಚಿದ್ಗಲ್ಲು ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮ ನಿರ್ದೇಶಕ ವಿನ್ಯಾಸ್ ಕೊಚ್ಚಿ ಘಟಕದ ನಿಕಟ ಪೂರ್ವಾಧ್ಯಕ್ಷ ಶಿವಪ್ರಸಾದ್ ಹಾಲೆಮಜಲು , ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ , ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಕುದ್ಪಾಜೆ ವೇದಿಕೆಗೆ ಆಹ್ವಾನಿಸಿದರು. ಲೋಕೇಶ್ ಆಕ್ರಿಕಟ್ಟೆ ಸ್ವಾಗತಿಸಿದರು.ಗಗನ್ ಕಿನ್ನಿಕುಮೇರಿ ಜೇಸಿ ವಾಣಿ ವಾಚಿಸಿದರು.ಅತಿಥಿಗಳನ್ನು ಅಶೋಕ ಕುಮಾರ್ ದಿಡುಪೆ, ಆದಿತ್ಯ ಚಿದ್ಗಲ್ಲು ಪರಿಚಯಿಸಿದರು. ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ವಂದಿಸಿದರು.ಜೇಸಿಐ ಪಂಜ ಪಂಚಶ್ರೀಯ ಪೂರ್ವಾಧ್ಯಕ್ಷರುಗಳು,ಸದಸ್ಯರುಗಳು ಹಾಗೂ ಜೇಸಿ ಸದಸ್ಯರು ಉಪಸ್ಥಿತರಿದ್ದರು.

ಕ್ರೀಡೋತ್ಸವದಲ್ಲಿ 550 ಕೆ.ಜಿ. 8 ಜನರ ಲೆವೆಲ್ ಮಾದರಿಯ ಪುರುಷರ ಮುಕ್ತ ಹಗ್ಗಜಗ್ಗಾಟ.

ಆಹ್ವಾನಿತ ತಂಡಗಳ ಕೆಸರು ಗದ್ದೆ ವಾಲಿಬಾಲ್ ಪಂದ್ಯಾಟ, ಕೆಸರು ಗದ್ದೆ ಮನೋರಂಜನೆ ಆಟಗಳು ನಡೆಯಲಿದೆ.

*ಡಿ.25.ಸಮಾರೋಪ ಸಮಾರಂಭ
ಡಿ.25 ರಂದು ಸಂಜೆ ಗಂಟೆ 6.30ರಿಂದ ಸಮಾರೋಪ ಸಮಾರಂಭ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಸಹಕಾರಿ ಧುರೀಣ ಜಾಕೆ ಮಾಧವ ಗೌಡ ಪಾಲ್ಗೊಳ್ಳಲಿದ್ದಾರೆ. ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ಗುರುಪ್ರಸಾದ್ ತೋಟ ರವರಿಗೆ ಕಮಲ ಪತ್ರ ಪ್ರಶಸ್ತಿ ಪುರಸ್ಕಾರ ನಡೆಯಲಿದ್ದು,ಜೇಸಿಐ ವಲಯ 15 ರ ವಲಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಪುರಸ್ಕರಿಸಲಿದ್ದಾರೆ. ಮುಳಬಾಗಿಲು ಕೂತಾಂಡ್ಲಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚಲಪತಿ ಕೆ.ವಿ ರವರು ಸನ್ಮಾನ ಸ್ವೀಕರಿಸಲಿದ್ದಾರೆ.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರು -ಚಿಲಿಂಬಿ ಊರ್ವ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿ ಬಳಗ ದವರಿಂದ ಬೊಳ್ಳಿಮಲೆತ ಶಿವಶಕ್ತಿಲು ಎಂಬ ಪೌರಾಣಿಕ ತುಳು ನಾಟಕ ಪ್ರದರ್ಶನ ಗೊಳ್ಳಲಿದೆ.