ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆ

0

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸುಳ್ಯ ತಾಲೂಕು ಇದರ ವತಿಯಿಂದ ದ.17 ರಂದು ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ 67ನೇ ವರ್ಷದ ಮಹಾ ಪರಿನಿಬ್ಬಾಣ ದಿನವನ್ನು ಪಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆಚರಿಸಲಾಯಿತು.


ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕೆ.ಪಿ.ಎಸ್. ಬೆಳ್ಳಾರೆ 10 ನೇ ತರಗತಿ ವಿದ್ಯಾರ್ಥಿ ಕಬಡ್ಡಿ ಆಟಗಾರ ಬಿ.ಎಸ್.ಕಿಶನ್ ದ್ರಾವಿಡ್, ಕೆಪಿಎಸ್ ಬೆಳ್ಳಾರೆ 10ನೇ ತರಗತಿ ವಿದ್ಯಾರ್ಥಿ ಕೆ.ವಿ.ಹೇಮಂತ್ ಮತ್ತು ವೇಗದ ನಡಿಗೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ನೂಜಿಬಾಳ್ತಿಲ ಬೆಥನಿ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಚೈತನ್ಯ ಇವರನ್ನು ಸನ್ಮಾನಿಸಲಾಯಿತು. ಸಾರ್ವಜನಿಕವಾಗಿ ರಮೇಶ್ ಮೆಟ್ಟಿ ನಡ್ಕ ಜಾನಪದ ಹಾಡುಗಾರ ಗುತ್ತಿಗಾರು, ಬಿಟ್ಟಿ ಬಿ. ನೆಡುನಿಲಂ ಗುತ್ತಿಗಾರು, ರೋಹಿತ್ ಚೀಮುಳ್ಳು ಇವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯದಲ್ಲಿ ಸಂಘ ಸಮಿತಿಯ ಸಂಚಾಲಕರಾದ ಯು.ಕೆ. ಗಿರೀಶ್ ಕುಮಾರ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ರಮೇಶ್ ಕೋಟೆ ನೆರವೇರಿಸಿದರು. , ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ನಿವರತ್ತ ಸೈನಿಕ ಕೊರಗಪ್ಪ ಕೆ. ಬಳ್ಪ ನೆರವೇರಿಸಿದರು. ಪ್ರೋತ್ಸಾಹಿಕವಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಮಾತಾಡಿದರು. ಮುಖ್ಯ ಅತಿಥಿಗಳಾಗಿ ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷ ಮಹೇಶ್ ಭಟ್ ಕರಿಕಳ, ದೇವಿಪ್ರಸಾದ್ ಕಾನತ್ತೂರು. ಜಯಕುಮಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಖಜಾಂಜಿ, ಸದಾಶಿವ ಉರ್ವ ಸ್ಟೋರ್ ಮಂಗಳೂರು, ಸಂಜಯ್ ಕುಮಾರ್ ಪೈಚಾರ್, ವಿಶ್ವನಾಥ ಅಲೆಕ್ಕಾಡಿ, ಅಚ್ಚುತ ಮಲ್ಕಜೆ , ಸುಜಿತ್ ಉರುಂಬಿ, ಸೀನಾ ಬಾಳಿಲ, ಉಪಸ್ಥಿತರಿದ್ದರು.
ನಂತರ ಸುಳ್ಯ ತಾಲೂಕಿನ ನೂತನ ಸಮಿತಿಯನ್ನು ರಚಿಸಲಾಯಿತು. ಕಾರ್ಯಕ್ರಮದಲ್ಲಿ ಕ್ರಾಂತಿ ಗೀತೆ ಮತ್ತು ನಿರೂಪಣೆಯನ್ನು ಯಶೋಧ ಮುರುಳ್ಯ ನೆರವೇರಿಸಿದರು. ಸ್ವಾಗತವನ್ನು ತೀರ್ಥಪ್ರಸಾದ್ ಕೇನ್ಯ, ಮತ್ತು ವಂದನಾರ್ಪಣೆಯನ್ನು ಅಚ್ಯುತ ಮಲ್ಕಜೆ ನೆರವೇರಿಸಿದರು.

ಪದಾಧಿಕಾರಿಗಳು
ಅಚ್ಯುತ ಮಲ್ಕಜೆ ತಾಲೂಕು ಸಂಚಾಲಕರಾಗಿ, ತಾಲೂಕು ಸಂಘಟನಾ ಸಂಚಾಲಕರಾಗಿ ಸಂಜಯ್ ಕುಮಾರ್ ಪೈಚಾರ್, ಕುಮಾರ ಬಳ್ಳಕ, ವಸಂತ ಛತ್ರಪಾಡಿ, ಜನಾರ್ದನ ಅಡ್ಕಾರ್, ಸದಾನಂದ ಪೈಚಾರ್, ಗೌರವ ಸಲಹೆಗಾರರಾಗಿ ವಿಶ್ವನಾಥ ಅಲೆಕ್ಕಾಡಿ, ದಲಿತ ಕಲಾ ಮಂಡಲಿಗೆ ರಮೇಶ್ ಮೆಟ್ಟಿನಡ್ಕ ಆಯ್ಕೆಯಾಗಿರುತ್ತಾರೆ.