ಆಲೆಟ್ಟಿ ಗ್ರಾಮದ ಗುಂಡ್ಯ ನಿವಾಸಿ ದಿ.ಕೊರಗಪ್ಪ ಎಂಬವರ ಪುತ್ರ ರಾಜೇಶ್ ಗುಂಡ್ಯ( 29) ರವರು ಇಂದು ಬೆಳಗ್ಗೆ ತನ್ನ ಕೋಣೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಕಳೆದ ಡಿ.21 ರಂದು ಕಾಣಿಯೂರಿನ ಚೈತ್ರಾ ಎಂಬಾಕೆಯನ್ನು ವಿವಾಹವಾಗಿದ್ದು, ಅತಿಥಿ ಸತ್ಕಾರ ಕಾರ್ಯಕ್ರಮವು ಡಿ.24 ರಂದು ಸುಳ್ಯದ ಪುರಭವನದಲ್ಲಿ ಏರ್ಪಡಿಸಿದ್ದರು. ಬಳಿಕ ತನ್ನ ಪತ್ನಿಯೊಂದಿಗೆ ಗುಂಡ್ಯ ಮನೆಯಲ್ಲಿದ್ದರು.
ಇಂದು ಬೆಳಗ್ಗೆ ಮನೆಯವರು ಎದ್ದು ಹೋದ ಬಳಿಕ ಅಲ್ಲೇ ಇದ್ದ ಸೀರೆಯನ್ನು ಬಳಸಿ ಈ ಕೃತ್ಯವೆಸಗಿಕೊಂಡಿರುವುದಾಗಿ ತಿಳಿದು ಬಂದಿದೆ. ಮೃತರು ತಾಯಿ ಶ್ರೀಮತಿ ಸುಶೀಲಾ,
ಪತ್ನಿ ಚೈತ್ರಾ ಹಾಗೂ ಕುಟುಂಬಸ್ಥರನ್ನು ,ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತ ಯುವಕ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ಬಿನ ಸಕ್ರಿಯ ಸದಸ್ಯರಾಗಿ ಗುರುತಿಸಿಕೊಂಡಿದ್ದರು.