ಐವರ್ನಾಡು ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಸಪ್ತಾಹ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ ಟ್ರಸ್ಟ್ ಸುಳ್ಯ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ. ಟ್ರಸ್ಟ್ ಬೆಳ್ತಂಗಡಿ, ಇವುಗಳ ಆಶ್ರಯದಲ್ಲಿ ಸ್ವಾಸ್ತ್ಯ ಸಂಕಲ್ಪ ಸಪ್ತಾಹ 2023, ಸರಕಾರಿ ಪದವಿ ಪೂರ್ವ ಕಾಲೇಜು, ಐವರ್ನಾಡು ಇಲ್ಲಿ ಡಿಸೆಂಬರ್ 29 ರಂದು ನಡೆಯಿತು.


ವಲಯಾಧ್ಯಕ್ಷರಾದ ವೇದಾ ಎಚ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನಿವೃತ್ತ ಎ
ಎಸ್.ಐ. ಭಾಸ್ಕರ್ ಅಡ್ಕಾರ್ ರವರು ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ದುಶ್ಚಟಗಳ ಸಹವಾಸದಿಂದ ಎದುರಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುತ್ತಿರುವ ಜನಜಾಗೃತಿಯ ಕಾರ್ಯ ಶ್ಲಾಘನೀಯ. ಜನರು ಮಾದಕ ವ್ಯಸನಗಳಿಗೆ ಬಲಿಯಾಗುವುದನ್ನು ತಪ್ಪಿಸಲು ನಿರಂತರವಾಗಿ ಶ್ರಮಿಸುತ್ತಿರುವ ಸಂಘಟಕರ ಕಾರ್ಯ ಸಂತೋಷದಾಯಕ. ಇಂತಹ ಕಾರ್ಯಕ್ರಮಗಳಿಗೆ ಪ್ರಾಮುಖ್ಯತೆ ಕೊಟ್ಟಾಗ ಯುವಜನತೆ ವಿದ್ಯಾರ್ಥಿಗಳು ದುಶ್ಚಟಮುಕ್ತ ಜೀವನವನ್ನು ನಡೆಸಲು ಸಾಧ್ಯ ಎಂದು ಹೇಳಿದರು.

ಈ ಸಂಧರ್ಭ ಕಾಲೇಜಿನ ಉಪನ್ಯಾಸಕರಾದ ಕಮಲಾಕ್ಷರವರು,, ಶಾಲಾ ಕಾಲೇಜುಗಳಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ವ್ಯಸನಮುಕ್ತ ಬದುಕಿಗಾಗಿ, ಗ್ರಾಮಭಿವೃದ್ಧಿ ಯೋಜನೆಯ ಇಂತಹ ಕಾರ್ಯಕ್ರಮಗಳು ಪ್ರಶಂಶನೀಯ ಎಂದು ಹೇಳಿದರು. ವಲಯ ಮೇಲ್ವಿಚಾರಕರಾದ ಗೋಪಾಲಕೃಷ್ಣರವರು ಪ್ರಾಸ್ತಾವಿಕವಾಗಿ ಮಾತನಾಡಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ದುಷ್ಟಟಮುಕ್ತ ಸಮಾಜದ ನಿರ್ಮಾಣದ ಜನಪರ ಹೋರಾಟದಲ್ಲಿ ದುಶ್ಚಟಗಳ ಬಗ್ಗೆ ಮಾಹಿತಿ ನೀಡಿ ಅವರನ್ನು ದುಶ್ಚಟ ಗಳಿಂದ ದೂರ ಸೆಳೆಯುವ ಸನ್ಮಾರ್ಗಕ್ಕೆ ಪ್ರೆರೇಪಿಸುವ ಕಾರ್ಯಕ್ರಮವೇ, ಎಂದು ಮಾತನಾಡಿ ವೇದಿಕೆಯಲ್ಲಿರುವ ಗಣ್ಯರನ್ನು ಸ್ವಾಗತಿಸಿದರು. ಸ್ವಾಸ್ತ್ಯ ಸಂಕಲ್ಪ ಪ್ರತಿಜ್ಞಾ ವಿಧಿಯನ್ನು ಸೇವಾಪ್ರತಿನಿಧಿಯಾದ ಶ್ರೀಮತಿ ಯಶೋಧರವರು ವಿದ್ಯಾರ್ಥಿಗಳಿಗೆ ಭೋದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸೇವಾಪ್ರತಿನಿದಿಯಾದ ಶ್ರೀಮತಿ ವನಿತಾರವರು ನಡೆಸಿಕೊಟ್ಟರು, ಪ್ರಾರ್ಥನೆಯನ್ನು ಕಾಲೇಜು ವಿದ್ಯಾರ್ಥಿಗಳಾದ ಶ್ರುತಿ, ಹಿತಾಶ್ರೀ, ಕಾವ್ಯ ರವರು ನಡೆಸಿಕೊಟ್ಟರು. ಧನ್ಯವಾದ ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿನಿಯಾದ ಕು. ಸ್ನೇಹರವರು ನಡೆಸಿಕೊಟ್ಟರು.