ಗೂನಡ್ಕ: ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ ಸಂಭ್ರಮ 2023-24

0

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸನ್ಮಾನ

ದ.ಕ. ಸಂಪಾಜೆ ಗ್ರಾಮದ ಗೂನಡ್ಕ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ ಸಂಭ್ರಮ 2023-24 ಕಾರ್ಯಕ್ರಮವು ಡಿ‌.30ರಂದು ನಡೆಯಿತು. ವಿದ್ಯಾಸಂಸ್ಥೆಯ ಅಧ್ಯಕ್ಷ ರುಕ್ಮಯ್ಯ ದಾಸ್ ಅವರು ಅಧ್ಯಕ್ಷತೆ ವಹಿಸಿದ್ದರು. ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರೋಪೆಸರ್ ಡಾ. ಮಮತ ಪುರುಷೋತ್ತಮ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ವಿದ್ಯಾಸಂಸ್ಥೆಯ ಕಾನೂನು ಸಲಹೆಗಾರ ಎ.ಡಿ. ಜಗದೀಶ್ ಹುದೇರಿ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರೊ. ಕುಸುಮಾಧರ ಕೆ.ವಿ. ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ವಿದ್ಯಾಸಂಸ್ಥೆ ಸಲಹೆಗಾರ ನಾರಾಯಣ ರಾವ್ ಶರ್ಮ, ಪೋಷಕರ ಸಂಘದ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಗಿರೀಶ್, ವಿದ್ಯಾಸಂಸ್ಥೆಯ ನಿರ್ದೇಶಕರುಗಳಾದ ಡಾ. ಸುಬ್ರಹ್ಮಣ್ಯ ಆರ್.ಎಂ., ಶ್ರೀಮತಿ ಲೀಲಾವತಿ ಬಿ., ಶ್ರೀಮತಿ ಕೀರ್ತಿ ಕುಮಾರಿ ಬಿ.ಆರ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾಸಂಸ್ಥೆಯ ನಿರ್ದೇಶಕ ಕಿಶೋರ್ ದಾಸ್ ಸ್ವಾಗತಿಸಿ, ಧನರಾಜ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಳಿಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಎಸ್.ಎಸ್.ಎಲ್.ಸಿ‌. ಪ್ರಥಮ ಬ್ಯಾಚ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಕಿಶೋರ್ ದಾಸ್, ಸಂಪಾಜೆ ಗ್ರಾಮ ಪಂಚಾಯತಿ ಸದಸ್ಯರಾದ ಜಿ.ಕೆ. ಹಮೀದ್, ಪಿ.ಕೆ. ಅಬೂಸಾಲಿ, ರಜನಿ, ಸುದ್ದಿ ಬಿಡುಗಡೆ ಪತ್ರಿಕೆ ವರದಿಗಾರ ಕೃಷ್ಣ ಬೆಟ್ಟ, ಕಲ್ಲುಗುಂಡಿ ಗಣೇಶ್ ಮೆಡಿಕಲ್ ಮಾಲಕ ಸುರೇಶ್ , ಪೋಷಕ ಸಮಿತಿ ಸದಸ್ಯರುಗಳಾದ ಚಂದ್ರಶೇಖರ, ಭವ್ಯ, ಬುಶ್ರ, ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕೃಷ್ಣರಾಜ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.