ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಜ್ಜನ ಲಕ್ ಪತಿ ಕಾರ್ಯಕ್ರಮ
ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ 4ನೇ ವರ್ಷದ ಸಜ್ಜನೋತ್ಸವ ಹಾಗೂ ಯಾರಾಗುವಿರಿ ಸಜ್ಜನ ಲಕ್’ಪತಿ” ಕಾರ್ಯಕ್ರಮ ಜ.6 ರಂದು ಗೂನಡ್ಕ ಸಜ್ಜನ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಮಾಜ ಸೇವೆಗೆ ನೀಡುತ್ತಿರುವ ಪ್ರತಿಷ್ಠಿತ ಸಜ್ಜನ ಸಿರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಹಸಿರು ಕ್ರಾಂತಿಯಿಂದ ಹೆಸರುಗಳಿಸಿರುವ ಸಮಾಜ ಸೇವಕ ಆರ್ .ಕೆ . ನಾಯರ್ ಮತ್ತು ಮಂಗಳೂರು ಕಾವೂರು ಕಾಲೇಜು ಪ್ರಾಂಶುಪಾಲರಾದ ಪ್ರೊಫೆಸರ್ ಡಾ.ಶಿವರಾಂ ಅವರಿಗೆ ಸಜ್ಜನ ಸಿರಿ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮ ನಡೆಯಲಿದೆ.
ವಿದ್ಯಾರ್ಥಿಗಳ ಜ್ಞಾನ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿ ಕೌನ್ ಬನೇಗಾ ಲಕ್ ಪತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಜ್ಜನ ಅದೃಷ್ಟ ದಪಂತಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಜ್ಜನೋತ್ಸವ ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ. ಸಜ್ಜನ ಲಕ್ ಪತಿ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ ರಮೇಶ್ ಉದ್ಘಾಟಿಸಲಿದ್ದಾರೆ. ಸಜ್ಜನ ಅದೃಷ್ಟ ದಂಪತಿಗಳಿಗೆ ಸುಳ್ಯ ತಹಶಿಲ್ದಾರ್ ಜಿ ಮಂಜುನಾಥ್ ಬಹುಮಾನ ವಿತರಿಸಲಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಕೆ .ಆರ್. ಗಂಗಾಧರ ಸಜ್ಜನ ಸಿರಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಸಜ್ಜನ ಲಕ್ ಪತಿ ಕಾರ್ಯಕ್ರಮವನ್ನು ಎಂ .ಬಿ . ಫೌಂಡೇಶನ್ ಅಧ್ಯಕ್ಷ ಎಂ .ಬಿ. ಸದಾಶಿವ ಮತ್ತು ಅಬ್ದುಲ್ಲಾ ನಾವೂರು ನಡೆಸಿಕೊಡಲಿದ್ದಾರೆ. ನಿವೃತ್ತ ಪ್ರಾಂಶುಪಾಲರಾದ ಪೂವಪ್ಪ ಕಣಿಯೂರು ಸಜ್ಜನೋತ್ಸವ ಬಗ್ಗೆ ಮಾತನಾಡಲಿದ್ದಾರೆ. ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಅಭಿನಂದನಾ ಬಾಷಣ ಮಾಡಲಿದ್ದಾರೆ. ಸಂಜೆ ವಿಠಲ ನಾಯಕ್ ಕಲ್ಲಡ್ಕ ರವರಿಂದ ಹಾಸ್ಯ ಸಂಜೆ ಕಾರ್ಯ ನಡೆಯಲಿದೆ ಎಂದು ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ತಿಳಿಸಿದ್ದಾರೆ.