ನಿಸರ್ಗ ಯುವಕ ಮಂಡಲ ಐನೆಕಿದು ಬೆಳ್ಳಿಹಬ್ಬ ಸಂಭ್ರಮ

0

ನಿಸರ್ಗ ಯುವಕ ಮಂಡಲ ಐನೆಕಿದು ಇದರ ಬೆಳ್ಳಿಹಬ್ಬದ ಪ್ರಯುಕ್ತ ಐನೆಕಿದು ಮೈದಾನದಲ್ಲಿ ಜ.18 ರಂದು ಹಗ್ಗಜಗ್ಗಾಟ, ಜ.19 ರಂದು ವಾಲಿಬಾಲ್, ಹಾಗೂ ಎರಡೂ ದಿನ ಸಂಜೆ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

ಜ. 18 ರಂದು ಬೆಳಗ್ಗಿನಿಂದ ಹಿಂದೂ ಬಾಂಧವರ ಹಗ್ಗ ಜಗ್ಗಾಟ ಪಂದ್ಯಾಟ ನಡೆಯಲಿದ್ದು, ಮೊದಲು ನೊಂದಾಯಿಸಿದ 40 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ, ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ನಗದು ಹಾಗೂ ನಿಸರ್ಗ ಟ್ರೋಫಿ ಬಹುಮಾವಿದೆ. ತಂಡದ ಪ್ರವೇಶ ಶುಲ್ಕ ರೂ.700 ಇರಲಿದೆ. ಅಂದು ಸಂಜೆ ಗಂಟೆ 5.00 ರಿಂದ ವಿದ್ಯಾರ್ಥಿಗಳಿಂದ ಹಾಗೂ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು ರಾತ್ರಿ ಗಂಟೆ 6:30 ರಿಂದ ಜೀವನ್ ಬೆಳ್ಳಾರೆ ನಿರ್ದೇಶನದ ಡ್ಯಾನ್ಸ್ & ಬೀಟ್ಸ್ ನೃತ್ಯ ಸಂಭ್ರಮ ನಡೆಯಲಿದೆ.

ಜ.19 ರಂದು ಸುಳ್ಯ ವಿಧಾನ ಸಭಾ ವ್ಯಾಪ್ತಿಯ ಹಿಂದೂ ಬಾಂಧವರ ವಾಲಿಬಾಲ್ ಪಂದ್ಯಾಟ ನಡೆಯಲಿದ್ದು ಮೊದಲು ನೋಂದಾಯಿತ 30 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಪಂಚಮ ಮತ್ತು ಷಷ್ಠಿ ನಗದು ಹಾಗೂ ನಿಸರ್ಗ ಟ್ರೋಫಿ ಬಹುಮಾವಿದೆ. ತಂಡದ ಪ್ರವೇಶ ಶುಲ್ಕ ರೂ.750 ಇರಲಿದೆ‌. ಅಂದು ಸಂಜೆ ಗಂಟೆ 5.00 ರಿಂದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕುಮಾರ ವೈಭವ ನಡೆಯಲಿದ್ದು,ನಂತರ ಸಭಾಕಾರ್ಯಕ್ರಮ ಬಳಿಕ ಕಲಾಕುಂಭ ಕುಳಾಯಿ ತಂಡದಿಂದ ತುಳು ನಾಟಕ “ಪರಮಾತ್ಮೆ ಪಂಜುರ್ಲಿ” ನಡೆಯಲಿದೆ.