ಅರಂತೋಡು-ಎಲಿಮಲೆ‌ ಲೋಕೋಪಯೋಗಿ ರಸ್ತೆ ಅಭಿವೃದ್ಧಿ ಪಡಿಸಿ

0

ಶಾಸಕರಿಗೆ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಮನವಿ

ಅರಂತೋಡಿನಿಂದ ಅಡ್ತಲೆ ವರೆಗಿನ ಅಗಲೀಕರಣ ಗೊಂಡ ರಸ್ತೆಯ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳನ್ನು ಹಾಗೂ ಮರಗಳನ್ನು ತೆಗಿಯುವ ಹಾಗೂ ಸುಮಾರು 3 ಕಿ ಮೀ ರಸ್ತೆ ಗೆ ಉಳಿದ ಎರಡನೆ ಕೋಟ್ ಡಾಮಾರಿಕರಣ ಗೊಳಿಸಲು ಸೂಚನೆ ನೀಡಲು,ಅಲ್ಲದೆ ವೇದಿಕೆಯ ಬೇಡಿಕೆಯ ಪಿಂಡಿಮನೆಯಿಂದ ಅಡ್ತಲೆ ತನಕ ಅಗಲೀಕರಣ ಗೊಳ್ಳಲು ಬಾಕಿ ಇರುವ ರಸ್ತೆಯನ್ನು ಅತೀ ಶೀಘ್ರದಲ್ಲಿ ಸೂಕ್ತ ಅನುದಾನ ಒದಗಿಸಲು ಶಾಸಕರಾದ ಭಾಗೀರಥಿ ಮುರುಳ್ಯರಿಗೆ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಹರಿಪ್ರಸಾದ್ ಅಡ್ತಲೆ ಹಾಗೂ ಕಾರ್ಯದರ್ಶಿ ರಂಜಿತ್ ಅಡ್ತಲೆ ಮನವಿ ಮಾಡಿದ್ದಾರೆ.

ಮನವಿಗೆ ಸ್ಪಂದಿಸಿದ ಶಾಸಕರು ಹಾಗೂ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಅವರು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರನ್ನು ಸ್ಥಳಕ್ಕೆ ಕರೆಯಿಸಿ , ಜನವರಿ 15 ರ ಒಳಗೆ ಎರಡನೇ ಕೋಟ್ ಡಾಮಾರಿಕರಣ ಪ್ರಾರಂಭ ಮಾಡಲು ಹಾಗೂ ರಸ್ತೆ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳನ್ನು ತೆರವು ಮಾಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಪಿಂಡಿಮನೆಯಿಂದ ಅಡ್ತಲೆ ತನಕ ರಸ್ತೆಯನ್ನು ಅಗಲೀಕರಣಗೊಳಿಸಲು ಆದಷ್ಟು ಬೇಗ ಸೂಕ್ತ ಅನುದಾನ ನೀಡಲು ಪ್ರಯತ್ನ ಮಾಡುತ್ತೇವೆ ಎಂಬುದಾಗಿ ಭರವಸೆ ನೀಡಿದರು. ಈ ಸಂದರ್ಭ ಬಿ ಜೆ ಪಿ ಪ್ರಮುಖರಾದ ಸಂತೋಷ್ ಕುತ್ತಮೊಟ್ಟೆ ಅವರು ಉಪಸ್ಥಿತರಿದ್ದರು.