ಮೂಡುಬಿದಿರೆಯಲ್ಲಿ ಮೂಡಿದ ಹೊಸ ‘ಸ್ವರ್ಣ ಪ್ರಭೆ’ – ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನ ಐದನೇ ಶಾಖೆ ಶುಭಾರಂಭ
ಚಿನ್ನಾಭರಣ ಉದ್ಯಮದಲ್ಲಿ ‘ಸ್ವರ್ಣ ನಕ್ಷತ್ರ’ದಂತೆ ಮಿನುಗುತ್ತಿರುವ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಹೊಸ ವರ್ಷದಂದು ಹೊಸದೊಂದು ಸಂಭ್ರಮಕ್ಕೆ ಮುನ್ನುಡಿ ಬರೆದಿದೆ. ಜೈನ ಕಾಶಿ ಎಂದೇ ಹೆಸರಾಗಿರುವ ಮೂಡುಬಿದಿರೆಯಲ್ಲಿ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಐದನೇ ಶಾಖೆ ಜ.01ರಂದು ಶುಭಾರಂಭಗೊಂಡಿದೆ.
ನೂತನ ಶಾಖೆಯ ಶುಭಾರಂಭದ ಪ್ರಯುಕ್ತ ಶಾಖಾ ಕಚೇರಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯ, ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯ ಹಾಗೂ ಕುಟುಂಬಸ್ಥರು ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪುತ್ತೂರು, ಸುಳ್ಯ, ಹಾಸನ ಹಾಗೂ ಕುಶಾಲನಗರದಲ್ಲಿ ಈಗಾಗಲೇ ಸುಸಜ್ಜಿತ ಮಳಿಗೆಗಳ ಮೂಲಕ ಆ ಭಾಗಗಳಲ್ಲಿ ಮನೆ ಮಾತಾಗಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಇದೀಗ ಜೈನ ಕಾಶಿ ಮತ್ತು ವಿದ್ಯಾಕಾಶಿ ಎಂದೇ ಹೆಸರುವಾಸಿಯಾಗಿರುವ ಬಸದಿಗಳ ನಾಡು ಮೂಡುಬಿದಿರೆಯಲ್ಲಿ ತನ್ನ ಐದನೇ ಸ್ವರ್ಣಾಭರಣ ಮಳಿಗೆಯ ಶಾಖೆಯನ್ನು ಹೊಸ ವರ್ಷದ ಮೊದಲ ದಿನವೇ ಶುಭಾರಂಭಗೊಳಿಸುವ ಮೂಲಕ ಆ ಭಾಗದ ಸ್ವರ್ಣಾಭರಣ ಗ್ರಾಹಕರಲ್ಲಿ ಚಿನ್ನದ ನಗುವನ್ನು ಮೂಡಿಸಿದೆ.ಸ್ವರ್ಣೋದ್ಯಮ ಕ್ಷೇತ್ರದಲ್ಲಿ ಅವಿರತ ಆರು ದಶಕಗಳಿಗೂ ಹೆಚ್ಚಿನ ಅನುಭವ ಮತ್ತು ವಿಶ್ವಾಸಾರ್ಹತೆಯನ್ನು ಮೂಡಿಸಿರುವ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ 2007ರಲ್ಲಿ ಹಾಸನದಲ್ಲಿ ಶಾಖೆಯನ್ನು ಪ್ರಾರಂಭಿಸುವ ಮೂಲಕ ಕರಾವಳಿಯಿಂದ ಆಚೆಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು.
ಆ ಬಳಿಕ, 2012ರಲ್ಲಿ ಸುಳ್ಯ ಹಾಗೂ 2017ರಲ್ಲಿ ಕುಶಾಲನಗರದಲ್ಲಿ ತನ್ನ ಶಾಖೆಗಳನ್ನು ಪ್ರಾರಂಭಿಸಿ ತನ್ನ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಂಡು ಗ್ರಾಹಕ ಬಂಧುಗಳ ಪ್ರೀತಿ ಮತ್ತು ವಿಶ್ವಾಸಾರ್ಹತೆಗೆ ಪಾತ್ರವಾಗಿದೆ.