ಮಂಡೆಕೋಲು ಗ್ರಾಮದ ಪೇರಾಲು ಕುತ್ಯಾಡಿ ಶ್ರೀ ಧರ್ಮದೈವಸ್ಥಾನ, ಕುತ್ಯಾಡಿ ತರವಾಡು ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ,ಶ್ರೀ ಧರ್ಮದೈವ ಹಾಗೂ ಉಪದೈವಗಳ ನಡಾವಳಿಯು ಜ.1 ರಿಂದ ಜ.3 ರವರೆಗೆ ಭಕ್ತಿ,ಸಂಭ್ರಮದಿಂದ ನಡೆಯಿತು.
ಜ.1 ರಂದು ಬೆಳಿಗ್ಗೆ ಉಗ್ರಾಣ ತುಂಬಿಸಲಾಯಿತು.
ಜ.02 ರಂದು ಬೆಳಿಗ್ಗೆ ಶ್ರೀ ಗಣಪತಿ ಹವನ ಮತ್ತು ನಾಗತಂಬಿಲ
ಪೂರ್ವಾಹ್ನ ತರವಾಡು ಮನೆ ಮತ್ತು ದೈವಸ್ಥಾನದ ಶುದ್ಧಿ ಕಲಶ, ಶ್ರೀ ವೆಂಕಟರಮಣ ದೇವರ ಹರಿಸೇವೆ,ಮಧ್ಯಾಹ್ನ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಅಪರಾಹ್ನ ಕೆಂಚರಾಯ ಪೂಜೆ ನಡೆಯಿತು.,ಸಂಜೆ ಗುರುಕಾರ್ನೋರು,ಸತ್ಯದೇವತೆ ಮತ್ತು ಪಾಷಾಣಮೂರ್ತಿ,ಗುಳಿಗ ಹಾಗೂ ಅಂಗಾರಬಾಕುಡ ದೈವಗಳ ಕೋಲ ನಡೆಯಿತು.
ಪ್ರಾತ:ಕಾಲ ವರ್ಣಾರ ಪಂಜುರ್ಲಿ ದೈವದ ಕೋಲ ಪೂರ್ವಾಹ್ನ ಶ್ರೀ ಧರ್ಮದೈವದ ನಡಾವಳಿ ನಡೆಯಿತು.
ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬದ ಯಜಮಾನರಾದ ಶಿವಪ್ಪ ಗೌಡ , ಆಡಳಿತ ಸಮಿತಿ ಅಧ್ಯಕ್ಷ ಜತ್ತಪ್ಪ ಗೌಡ ಶೆಟ್ಟಿಮಜಲು, ಕಾರ್ಯದರ್ಶಿ ತೀರ್ಥರಾಮ ಗೌಡ ಮತ್ತು ಆಡಳಿತ ಸಮಿತಿಯ ಸರ್ವಸದಸ್ಯರು,ಕುತ್ಯಾಡಿ ಕುಟುಂಬಸ್ಥರು ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.