ಸುಳ್ಯ ಖಾಸಗಿ ಬಸ್ ನಿಲ್ದಾಣದ ರಿಕ್ಷಾ‌ ಸ್ಟ್ಯಾಂಡ್ ಎದುರಿನ ಮುಖ್ಯ ರಸ್ತೆಯ ಬದಿ ಹಾಕಲಾಗಿದ್ದ ಶ್ರೀರಾಮ ಬ್ಯಾನರ್ ಹರಿದ ಪ್ರಕರಣ

0

ರಿಕ್ಷಾ ಚಾಲಕರು, ಹಿಂದೂ ಸಂಘಟನೆಗಳ ಆಕ್ರೋಶ : ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಸುಳ್ಯದ ಖಾಸಗಿ‌ ಬಸ್‌ ನಿಲ್ದಾಣದ ಸಮೀಪ ರಿಕ್ಷಾ ಸ್ಟ್ಯಾಂಡ್ ನವರು‌ ಮುಖ್ಯ‌ ರಸ್ತೆಯ‌ ಬದಿ ಹಾಕಲಾಗಿದ್ದ ಸುಳ್ಯ ಜಾತ್ರೋತ್ಸವ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ ವಿಚಾರವಾಗಿ ಬ್ಯಾನರ್ ಅಳವಡಿಕೆ ಮಾಡಲಾಗಿತ್ತು. ಆ ಬ್ತಾನರ್ ನಲ್ಲಿದ್ದ ಶ್ರೀರಾಮ ಫೋಟೊ ಹರಿದಿರುವುದಕ್ಕೆ ಬ್ಯಾನರ್ ಅಳವಡಿಸಿದ ಚಾಲಕರು ಹಾಗೂ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.

ಕಳೆದ ಮೂರು ನಾಲ್ಕು ದಿನಗಳ ಹಿಂದೆ ಬ್ಯಾನರ್ ಅಳವಡಿಸಲಾಗಿದ್ದು ನಿನ್ನೆ ರಾತ್ರಿ ಬ್ಯಾನರ್ ನಲ್ಲಿದ್ದ ಅಯೋಧ್ಯೆ ಶ್ರೀರಾಮನ ಭಾವಚಿತ್ರ ಹರಿಯಲಾಗಿದೆ. ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಪೋಲೀಸರು ಸ್ಥಳಕ್ಕೆ ಬಂದಿದ್ದಾರೆ.

ಬ್ಯಾನರ್ ಹರಿದವರರನ್ನು ದೇವರೇ ನೋಡಿಕೊಳ್ಳಲಿ ಎಂದು ರಿಕ್ಷಾ ಯೂನಿಯನ್ ನವರು ಹೇಳಿದರೆ, ಬ್ಯಾನರ್ ಹರಿದಿರುವ ಕುರಿತು ತನಿಖೆ ನಡೆಸಿ, ನ್ಯಾಯಕೊಡಿಸುವುದಾಗಿ ಎಸ್.ಐ. ಈರಯ್ಯರು ರಿಕ್ಷಾ ಚಾಲಕರಿಗೆ ಭರವಸೆ ನೀಡಿದರು.

24 ಗಂಟೆಯೊಳಗೆ ಆರೋಪಿಯನ್ನು ಬಂಧಿಸದಿದ್ದಲ್ಲಿ ರಸ್ತೆಯಲ್ಲಿ ‌ಕುಳಿತು ಪ್ರತಿಭಟನೆ ನಡೆಸುವುದಾಗಿ ಭಜರಂಗದಳ ಪ್ರಮುಖ ಲತೀಶ್ ಗುಂಡ್ಯ ಆಕ್ರೋಶ ವ್ಯಕ್ತಪಡಿಸಿದರು.