ಸುಳ್ಯದ ರಿಕ್ಷಾ ಚಾಲಕ ಮಾಲಕರು ಸುಳ್ಯ ಜಾತ್ರೋತ್ಸವ, ಅಯೋಧ್ಯಾ ಶ್ರೀರಾಮ ಬ್ಯಾನರ್ ಅಳವಡಿಸಿದ್ದು ಇದರಲ್ಲಿದ್ದ ಶ್ರೀರಾಮನ ಭಾವಚಿತ್ರವನ್ನು ಕಿಡಿಗೇಡಿಗಳು ಹರಿದು ಹಾಕಿದ್ದು ಈ ಹಿಂದೂ ವಿರೋಧಿ ಕೃತ್ಯವನ್ನು ಭಜರಂಗದಳವು ಖಂಡಿಸುತ್ತದೆ. ಬ್ಯಾನರ್ ಹರಿದವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಜ.೭ರ ಬೆಳಗ್ಗೆ ೧೦ ಗಂಟೆಯೊಳಗೆ ಬಂಧಿಸದೇ ಇದ್ದರೆ , ಬ್ಯಾನರ್ ಅಳವಡಿಸಿರುವ ಜಾಗದಲ್ಲಿ ಪ್ರತಿಭಟನೆ ನಡೆಸಲಿzವೆ. ಇಂತಹ ಕೃತ್ಯವನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ಭಜರಂಗದಳ ಸುಳ್ಯ ಪ್ರಾಂತ ತಾಲೂಕು ಸಂಯೋಜಕ ಹರಿಪ್ರಸಾದ್ ಎಲಿಮಲೆ ತಿಳಿಸಿದ್ದಾರೆ.