ಈ ಬಾರಿ ಸುಳ್ಯ ಜಾತ್ರೆಯಲ್ಲಿ ಪ್ರತಿದಿನವೂ ಸಂಜೆ ವೇಳೆಗೆ ಧಾರಾಕಾರ ಮಳೆ ಸುರಿಯುತ್ತಿದ್ದು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಸಾವಿರಾರು ರೂಪಾಯಿ ಸ್ಥಳ ಬಾಡಿಗೆ ನೀಡಿ ತಾತ್ಕಾಲಿಕ ಅಂಗಡಿ ಕೋಣೆ ನಿರ್ಮಿಸಿ, ಲಕ್ಷ ಲಕ್ಷ ರೂಗಳ ಬಂಡವಾಳ ಹಾಕಿ ಜಾತ್ರೆಯ ವ್ಯಾಪಾರಕ್ಕೋಸ್ಕರ ಕುಳಿತ ವ್ಯಾಪಾರಿಗಳು ಒಂದು ಕಡೆ ಧಾರಾಕಾರ ಮಳೆಯಿಂದಾಗಿ ಅಂಗಡಿಗಳನ್ನು ತೆರೆಯಲಾಗದೆ ಕುಳಿತಿದ್ದು ಇನ್ನೊಂದು ಎಡೆ ಮಳೆಯ ರಭಸಕ್ಕೆ ಅವರ ಸಾಮಗ್ರಿಗಳು ಕೂಡ ಕೊಚ್ಚಿಕೊಂಡು ಹೋಗುತ್ತಿವೆ. ವ್ಯಾಪಾರವನ್ನು ಮಾಡುವುದು ಬಿಟ್ಟು ತಮ್ಮ ಸಾಮಾಗ್ರಿಗಳನ್ನು ರಕ್ಷಿಸುವುದೇ ವ್ಯಾಪಾರಸ್ಥರ ಹೊಂದಿರುವ ಸವಾಲಾಗಿದೆ. ಮಳೆಯ ಕಾರಣದಿಂದಾಗಿ ಸಾರ್ವಜನಿಕರು ಕೂಡ ಜಾತ್ರೆಯ ಸಂತೆ ಮೈದಾನಕ್ಕೆ ಕಾಲಿಡುತ್ತಿಲ್ಲ. ಇದರಿಂದಾಗಿ ಜಾತ್ರಾ ವ್ಯಾಪಾರಸ್ಥರು ಸಂಪೂರ್ಣ ಕಂಗಾಲಾಗಿ ಹೋಗಿದ್ದಾರೆ. ಹಾಗಾಗಿ ದೇವಸ್ಥಾನದ ಆಡಳಿತ ಮಂಡಳಿಯು ವ್ಯಾಪಾರಸ್ಥರ ನೆಲ ಬಾಡಿಗೆಯಲ್ಲಿ ರಿಯಾಯಿತಿಯನ್ನು ನೀಡಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಆಗ್ರಹಪೂರ್ವಕವಾಗಿ ಮನವಿ ಮಾಡುತ್ತೇವೆ ಎಂದು ನ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ
ವಿನಯಕುಮಾರ್ ಕಂದಡ್ಕ ತಿಳಿಸಿದ್ದಾರೆ.
Home ಪ್ರಚಲಿತ ಸುದ್ದಿ ಸುಳ್ಯ ಜಾತ್ರೆ : ಮಳೆಯಿಂದ ಕಂಗಾಲಾದ ಜಾತ್ರಾ ವ್ಯಾಪಾರಸ್ಥರಿಗೆ ಬಾಡಿಗೆ ರಿಯಾಯಿತಿ ನೀಡಲು ಮನವಿ :...