ಜಾಲ್ಸೂರು ಗ್ರಾಮದ ಅರ್ತಾಜೆ ಪರಿಸರದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಸಂಬಂಧಪಟ್ಟವರು ಈ ಕಡೆ ಗಮನಹರಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಳೆದ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವುದು, ಚರಂಡಿ ಅಸ್ವಚ್ಛತೆ, ಮತ್ತು ರಸ್ತೆಯ ಮೇಲೆ ಗಲೀಜು ಹರಿಯುತ್ತಿರುವ ಪರಿಣಾಮ ಕಳೆದ ಒಂದು ವಾರದಿಂದ ಸೊಳ್ಳೆಗಳು ವಿಪರೀತವಾಗಿ ಹೆಚ್ಚಿದ್ದು ಜನರ ನೆಮ್ಮದಿ ಕೆಡಿಸಿದೆ.
ಮಳೆ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಪದೇಪದೇ ವಿದ್ಯುತ್ ವ್ಯತ್ತಯ ಉಂಟಾಗುತ್ತಿದೆ.
ಸೊಳ್ಳೆ ನಿರೋಧಕ ಮತ್ತು ಫ್ಯಾನ್ ಬಳಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡದಂತಾಗಿದೆ ಎಂದು ಸ್ಥಳೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಹಾಗಾಗಿ ಸಂಬಂಧಪಟ್ಟವರು ಇತ್ತ ಗಮನಹರಿಸಿ ಈ ಪ್ರದೇಶ ಗಳಲ್ಲಿ ಕನಿಷ್ಠ ಎರಡು ವಾರಗಳಂತೆ ಸೊಳ್ಳೆ ನಿರೋಧಕ ಸಿಂಪಡಿಸುವಂತೆ ಸ್ಥಳೀಯ ಜನತೆ ಆಗ್ರಹಿಸಿದ್ದಾರೆ.