ಬೆಳ್ಳಾರೆ ಗ್ರಾಮ ಪಂಚಾಯತ್ ನ ಮಕ್ಕಳ ಗ್ರಾಮ ಸಭೆಯು ಮಿನಿ ಸಭಾಂಗಣದಲ್ಲಿ ಜ.09 ರಂದು ನಡೆಯಿತು. ಈ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್ ರೈ ರವರು ವಹಿಸಿದ್ದರು.
ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರು ಸದಸ್ಯರು,ಶಾಲಾ ಮುಖ್ಯೋಪಾಧ್ಯಾಯರು,ಪಿಡಿಒ,ಕಾರ್ಯದರ್ಶಿ,ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಉಷಾ ,ಚೈಲ್ಡ್ ರೈಟ್ಸ್ ಟ್ರಸ್ಟ್ ಅಮೃತ ಉಪಸ್ಥಿತರಿದ್ದರು.
60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಮಕ್ಕಳ ಪ್ರಾರ್ಥನಾ ಗೀತೆಯೊಂದಿಗೆ ಮಕ್ಕಳ ಗ್ರಾಮ ಸಭೆ ಆರಂಭಗೊಂಡಿತು.
ಬೀದಿ ನಾಯಿಗಳ ಕಾಟ,ಶಿಕ್ಷಕರ ಕೊರತೆ,ಪ್ರಯೋಗಾಲಯ ಕೊರತೆ,ಸೂಚನಾ ಫಲಕ,ಪ್ರಿಂಟರ್,ಬಸ್ ತಂಗುದಾಣದ ನೀರಿನ ಸಮಸ್ಯೆ,ಆಟದ ಸಾಮಾಗ್ರಿಯ ಕೊರತೆ,ಮೂಲಭೂತ ಸೌಕರ್ಯ ದ ಕೊರತೆಗಳ ಬಗ್ಗೆ ಚರ್ಚೆ ಮಾಡಲಾಯಿತು.
ನಂತರ ಪಿಡಿಒ ಸೂಚನಾ ಫಲಕ ,ಬ್ಯಾರಿಗೆಡ್ ಮತ್ತು ನೀರಿನ ಸಮಸ್ಯೆ ಯ ಬಗ್ಗೆ ಪರಿಹಾರ ಒದಗಿಸುತ್ತೇವೆ.ಉಳಿದ ಸಮಸ್ಯೆ ಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದರು.ಪಂಚಾಯತ್ ಕಾರ್ಯದರ್ಶಿ ಕಾರ್ಯಕ್ರಮ ನಡೆಸಿದರು, ಲೆಕ್ಕ ಸಹಾಯಕಿ ಉಪಸ್ಥಿತರಿದ್ದರು.