ಸುಳ್ಯದಲ್ಲಿ ಹೆಚ್ ಬಿ ಸ್ಪೋರ್ಟ್ಸ್ ಮ್ಯಾಕ್ಸ್‌‌ ಶುಭಾರಂಭ

0

ಸುಳ್ಯ ಮೊಗರ್ಪಣೆ ವೆಂಕಟರಮಣ ಸೊಸೈಟಿ ಬಳಿ ಇಂಜಿನಿಯರ್ ಕಲಂದರ್ ಎಲಿಮಲೆ ಮತ್ತು ಮೊಯ್ದೀನ್ ಅಜ್ಮಿರಿಯಾ ಮಾಲಕತ್ವದ ಹೆಚ್ ಬಿ ಸ್ಪೋರ್ಟ್ಸ್ ಮ್ಯಾಕ್ಸ್‌‌ ಕ್ರೀಡಾ ಸಾಮಾಗ್ರಿಗಳ ಮಾರಾಟ ಮಳಿಗೆ ಜ.11 ರಂದು ಶುಭಾರಂಭ ಗೊಂಡಿತು.


ಇದರ ಉದ್ಘಾಟನೆಯನ್ನು ನೆಹರು ಮೆಮೊರಿಯಲ್ ಕಾಲೇಜು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ರಾಧಾಕೃಷ್ಣ ಮಾಣಿಬೆಟ್ಟು ಮತ್ತು ಅವರ ಧರ್ಮಪತ್ನಿ ಮಹಿಳಾ ಸಮಾಜ ಅಧ್ಯಕ್ಷೆ ಪುಷ್ಪಾರಾಧಕೃಷ್ಣ ನೆರೆವೆರಿಸಿದರು.


ಕಾರ್ಯಕ್ರಮದಲ್ಲಿ ಸುಳ್ಯ ಅಲ್ಪಸಂಖ್ಯಾತ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ ಅಧ್ಯಕ್ಷತೆ ವಹಿಸಿದ್ದರು.


ನಗರ ಪಂಚಾಯತ್ ಮಾಜಿ ಸದಸ್ಯರಾದ ಹಾಜಿ ಕೆ ಎಂ ಮುಸ್ತಫಾ, ಸದಸ್ಯರಾದ ಉಮ್ಮರ್ ಕೆ ಎಸ್,ಶರೀಫ್ ಕಂಠಿ,ಡೇವಿಡ್ ದೀರಾ ಕ್ರಾಸ್ತ, ರಿಯಾಜ್ ಕಟ್ಟೆಕ್ಕಾರ್,ಸೂರ್ಯ ಬ್ಯಾಟರಿ ಮಳಿಗೆ ಮಾಲಕ ಚಂದ್ರಶೇಖರ, ವೆಂಕಟರಮಣ ಸೊಸೈಟಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕೆ.ಟಿ ವಿಶ್ವನಾಥ,ಸುಳ್ಯ ಅಶ್ರಯ ಹೋರಾಟ ಸಮಿತಿ ಅಧ್ಯಕ್ಷ ರಶೀದ್ ಜಟ್ಟಿಪಳ್ಳ, ಗ್ರೀನ್‌ ಬಾಯ್ಸ್‌ ಅಸೋಸಿಯೇಷನ್ ಅಧ್ಯಕ್ಷ ಶಿಹಾಬ್ ಷಾ,ಸಿದ್ದೀಕ್ ಕಟ್ಟೆಕ್ಕಾರ್,ಶಮೀರ್ ಶಾಂತಿನಗರ,ನಿಝಾರ್ ಶಾಂತಿನಗರ,ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಥಮ ಗ್ರಾಹಕರಾಗಿ ಯಲ್ಲಪ್ಪ ಸಹಕರಿಸಿದರು.


ಸಂಸ್ಥೆಯ ಮಾಲಕರಾದ ಕಲಂದರ್ ಎಲಿಮಲೆ ಸ್ವಾಗತಿಸಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಸಿರಾಜ್ ಜಟ್ಟಿಪಳ್ಳ ಸಹಕರಿಸಿದರು.
ಮಳಿಗೆಯಲ್ಲಿ ಎಲ್ಲಾ ತರಹದ ಕ್ರೀಡಾಕೂಟಕ್ಕೆ ಬೇಕಾಗುವ ಟ್ರೋಫಿ,ಸ್ಮರಣಿಕೆ,ಜರ್ಸಿ,ಇನ್ನಿತರ ಕ್ರೀಡೆಗಳಿಗೆ ಬೇಕಾಗುವ ಎಲ್ಲಾ ಸಾಮಾಗ್ರಿಗಳ ದೊರೆಯುತ್ತದೆ.