ಮಂಗಳೂರು ವಾಲ್ ನೆಟ್ ಫರ್ನಿಚರ್ ಸಂಸ್ಥೆಯ ಐದನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಲಕ್ಕಿ ಕೂಪನ್ನಲ್ಲಿ ಪ್ರಥಮ ಪ್ರೋತ್ಸಾಹಕರ ಬಹುಮಾನವಾಗಿ ಚಿನ್ನದ ಉಂಗುರವನ್ನು ಸಂಸ್ಥೆಯ ಗ್ರಾಹಕರಾದ ಸುಳ್ಯದ ದಿವ್ಯಾ ರೈ ನಂಜೆ ಡಿಜೆ ಪ್ಲಸ್ ರವರು ತಮ್ಮದಾಗಿಸಿಕೊಂಡಿದ್ದಾರೆ.
ಈ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಸುಳ್ಯ ಜಾತ್ರೋತ್ಸವದಲ್ಲಿ ಸಂಸ್ಥೆ ಅಳವಡಿಸಲಾಗಿದ್ದ ವಾಲ್ನಟ್ ಫರ್ನಿಚರ್ಸ್ ಮಾರ್ಕೆಟಿಂಗ್ ಸ್ಟಾಲಿನಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಇಬ್ರಾಹಿಂ, ಸುಜನ್ ನೆತ್ತರ, ಹಾಜಿ ಅಬೂಬಕ್ಕರ್ ಬಿಸಿ ರೋಡ್, ಸಂಸ್ಥೆಯ ಸಿಬ್ಬಂದಿ ಯತೀಶ್ ಶೆಟ್ಟಿ, ಸಂಸ್ಥೆಯ ಸುಳ್ಳದ ಪ್ರತಿನಿಧಿ ರವಿಚಂದ್ರ ಕೊಡಿಯಾಲ ಬೈಲು, ಶ್ರೀಮತಿ ಚೈತ್ರಾ, ಜಯ ಸುಧಾ ದೀಪಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಇಬ್ರಾಹಿಂ ವಾಲ್ನಟ್ ಫರ್ನಿಚರ್ ಸಂಸ್ಥೆಯು ಕಳೆದ ಐದು ವರ್ಷಗಳಿಂದ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು ಸಂಸ್ಥೆಯ ಐದನೇ ವಾರ್ಷಿಕೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇದರ ಬ್ರಾಂಚ್ ಗಳನ್ನು ತೆರೆಯಲು ಕಾರ್ಯಯೋಜನೆಗಳನ್ನು ರೂಪಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಸಂಸ್ಥೆಯ ವತಿಯಿಂದ ನಮ್ಮ ಪ್ರತಿಯೊಬ್ಬ ಗ್ರಾಹಕರಿಗೂ ಪ್ರಯೋಜನವಾಗುವ ನಿಟ್ಟಿನಲ್ಲಿ ಕಂತುಗಳ ರೂಪದಲ್ಲಿಯೂ ಕೂಡ ಉತ್ತಮ ಗುಣಮಟ್ಟದ ಗೃಹ ಉಪಯೋಗಿ ವಸ್ತುಗಳನ್ನು, ಹಾಗೂ ಉತ್ತಮ ಕಂಪನಿಗಳ ಕಾರು ಮತ್ತು ದ್ವಿಚಕ್ರ ವಾಹನಗಳನ್ನು, ಚಿನ್ನದ ಆಭರಣಗಳನ್ನು, ಬಂಪರ್ ಬಹುಮಾನವಾಗಿ ಎರಡು ಬೆಡ್ ರೂಮಿನ ಸುಸಜ್ಜಿತ ಮನೆಯನ್ನು ಪಡೆಯುವ ಅವಕಾಶವನ್ನು ನೀಡಿದ್ದೇವೆ. ಇದರಲ್ಲಿ ಗ್ರಾಹಕರು ಪ್ರತಿ ತಿಂಗಳಿಗೆ ಒಂದುವರೆ ಸಾವಿರ ರೂಪಾಯಿಯಂತೆ 20 ಕಂತುಗಳನ್ನು ಪಾವತಿಸಿ,ಪ್ರತಿ ತಿಂಗಳು ಕಾರು ದ್ವಿಚಕ್ರವಾಹನ ಮತ್ತು ಇಂಪಾರ್ಟೆಂಡ್ ಫರ್ನಿಚರ್ ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.
ಈ ಅದೃಷ್ಟವಂತ ಚೀಟಿಯನ್ನು ಪ್ರತಿ ತಿಂಗಳ 10ನೇ ತಾರೀಖಿನಂದು ಮಂಗಳೂರಿನ ನಮ್ಮ ಸಂಸ್ಥೆಯಲ್ಲಿ ತೆಗೆಯಲಾಗುತ್ತಿದ್ದು ಈ ರೀತಿಯಾಗಿ ಸಂಸ್ಥೆಯ ಐದನೇ ವರ್ಷದ ಆಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.