ಬೆಳ್ಳಾರೆ ಕೆ.ಪಿ.ಎಸ್.ವಿದ್ಯಾರ್ಥಿಗಳನ್ನು ಒಳಗೊಂಡ ಕರ್ನಾಟಕ ತಂಡ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯದಲ್ಲಿ ದ್ವಿತೀಯ : ಖೇಲೋ ಇಂಡಿಯಾ ಪಂದ್ಯಾಟಕ್ಕೆ ಆಯ್ಕೆ

0

ಕ್ರೀಡಾಪಟುಗಳ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ

ತೆಲಂಗಾಣದಲ್ಲಿ ನಡೆದ 17 ವರ್ಷದ ಹುಡುಗರ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ ಕಬಡ್ಡಿ ತಂಡವನ್ನು ಪ್ರತಿನಿಧಿಸಿರುವ ಬೆಳ್ಳಾರೆ ಕೆ.ಪಿ.ಎಸ್. ಸಂಸ್ಥೆಯ 10 ನೇ ತರಗತಿಯ ವಿದ್ಯಾರ್ಥಿಗಳಾದ ಕಿಶನ್ ದ್ರಾವಿಡ್ ಹಾಗೂ ಹೇಮಂತ ಕೆ. ವಿ ಇವರು ಖೇಲೋ ಇಂಡಿಯಾ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಕೆಪಿಎಸ್ ನ ದೈಹಿಕ ಶಿಕ್ಷಣ ಶಿಕ್ಷಕಿಯಾದ ಪುಷ್ಪಾವತಿ ಅವರು ಕರ್ನಾಟಕ ತಂಡದ ವ್ಯವಸ್ಥಾಪಕಿಯಾಗಿದ್ದರು.


ಪುಷ್ಪಾವತಿಯವರು ಕರ್ನಾಟಕ ತಂಡದ ಕ್ರೀಡಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.


ಜ.13 ರಂದು ಕ್ರೀಡಾಪಟುಗಳಿಗೆ ಸ್ವಾಗತ

ಕ್ರೀಡಾಪಟುಗಳು ತೆಲಂಗಾಣದಿಂದ ಬೆಂಗಳೂರು ಮೂಲಕ ಸುಬ್ರಹ್ಮಣ್ಯ ಮಾರ್ಗವಾಗಿ ಬರುತ್ತಿರುವ ಕ್ರೀಡಾಪ್ರತಿಭೆಗಳನ್ನು ಹಾಗೂ
ಕ್ರೀಡಾಧಿಕಾರಿಯಾದ ಪುಷ್ಪಾವತಿ ಇವರನ್ನು ಸುಬ್ರಹ್ಮಣ್ಯದಿಂದ ಬರಮಾಡಿಕೊಂಡು ಜ.13 ರಂದು ಶನಿವಾರ ಪೂರ್ವಾಹ್ನ 10.00 ಕ್ಕೆ ಪಂಜ ಪೇಟೆಯಿಂದ ಮೆರವಣಿಗೆಯ ಮೂಲಕ ಸಂಸ್ಥೆಗೆ ಬರಮಾಡಿಕೊಳ್ಳುವ ಕಾರ್ಯಕ್ರಮ ಆಯೋಜಿಸಲಾಗಿದ್ದು ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಬೆಳ್ಳಾರೆಯ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು , ಪೋಷಕರು , ಕ್ರೀಡಾಭಿಮಾನಿಗಳು ಭಾಗವಹಿಸಿ ಪ್ರೋತ್ಸಾಹಿಸುವಂತೆ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ ವಿನಂತಿಸಿದ್ದಾರೆ.