ಮಾಡನ್ನೂರ್ ನೂರುಲ್ ಹುದಾ ಸಭಾಂಗಣದಲ್ಲಿ ನಡೆದ ದ.ಕ ಜಿಲ್ಲಾ ಮಟ್ಟದ ಮುಸಾಬಕ ಕಲಾ ಸಾಹಿತ್ಯ ಉತ್ಸವದಲ್ಲಿ ಜೂನಿಯರ್ ವಿಭಾಗದ ಕಿರಾಅತ್ ಮತ್ತು ಬರವಣಿಗೆ ಸ್ಪರ್ದೆಯಲ್ಲಿ ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಾದ ಮುಝಮ್ಮಿಲ್ ಮತ್ತು ಹಫೀಝ್ ಕೊಡಂಕೆರಿ ಇವರು ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಅರಂತೋಡು ಜಮಾಅ ತ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.