ಸವಣೂರಿನಲ್ಲಿ ರೋಟರಿ ಸ್ನೇಹ ರಶ್ಮಿ

0

ರೋಟರಿ ಕ್ಲಬ್ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯ ಸಿಟಿ, ಸುಬ್ರಹ್ಮಣ್ಯ, ಬೆಳ್ಳಾರೆ, ಪುತ್ತೂರು, ಪುತ್ತೂರು ಈಸ್ಟ್, ಲಯನ್ಸ್ ಕ್ಲಬ್ ಸುಳ್ಯ ಮತ್ತು ಇಂಟರ್ ವ್ಹೀಲ್ ಕ್ಲಬ್ ಇವುಗಳ ಆಹ್ವಾನದೊಂದಿಗೆ ಸ್ನೇಹ ರಶ್ಮಿ ಇಂಟರ್ ಕ್ಲಬ್ ಫೆಲೋಶಿಪ್ ಮೀಟ್ 2023-24 ರೊ. ಸವಣೂರು ಕೆ. ಸೀತಾರಾಮ ರೈಯವರ ನೇತೃತ್ವದಲ್ಲಿ ಜ. 13ರಂದು ಸವಣೂರಿನ ರಶ್ಮಿ ನಿವಾಸದಲ್ಲಿ ನಡೆಯಿತು.

ಸುಳ್ಯ ರೋಟರಿ ಕ್ಲಬ್‌ನ ಅಧ್ಯಕ್ಷ ಆನಂದ ಖಂಡಿಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಹೆಚ್.ಆರ್. ಕೇಶವ್, ಲಯನ್ಸ್ ಡಿಸ್ಟ್ರಿಕ್ಟ್ ಪೂರ್ವಾಧ್ಯಕ್ಷ ಡಾ. ಗೀತಾ ಪ್ರಕಾಶ್ ಭಾಗವಹಿಸಿದ್ದರು. ಅತಿಥಿಗಳಾಗಿ ರೋಟರಿ ಸುಳ್ಯ ಸಿಟಿ ಅಧ್ಯಕ್ಷ ಗಿರೀಶ್ ನಾರ್ಕೋಡು, ಸುಬ್ರಹ್ಮಣ್ಯ ರೋಟರಿ ಕ್ಲಬ್ ಸೆಕ್ರೆಟರಿ ಚಂದ್ರಶೇಖರ ನಾಯರ್, ಬೆಳ್ಳಾರೆ ಕ್ಲಬ್‌ನ ಅಧ್ಯಕ್ಷ ಶಶಿಧರ್ ಬಿ.ಕೆ, ಸುಳ್ಯ ಇನ್ನರ್ ವ್ಹೀಲ್ ಅಧ್ಯಕ್ಷೆ ಸವಿತಾ ನಾರ್ಕೋಡು, ಪುತ್ತೂರು ಕ್ಲಬ್ ಅಧ್ಯಕ್ಷ ಜಯರಾಜ್ ಭಂಡಾರಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಭಾಗವಹಿಸಿದ್ದರು. ಉಳಿದಂತೆ ಸುಳ್ಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ರೋಟರಿ ಕ್ಲಬ್ ಕಾರ್ಯದರ್ಶಿ ಕಸ್ತೂರಿ ಶಂಕರ್, ಸುಳ್ಯ ಸಿಟಿ ಕಾರ್ಯದರ್ಶಿ ಚೇತನ್, ಸುಬ್ರಹ್ಮಣ್ಯ ಕ್ಲಬ್‌ನ ಕಾರ್ಯದರ್ಶಿ ಮೋಹನ್ ದಾಸ್, ಸುಳ್ಯ ಇನ್ನರ್ ವ್ಹೀಲ್ ಕಾರ್ಯದರ್ಶಿ ಚಿಂತನಾ ಸುಬ್ರಹ್ಮಣ್ಯ, ಬೆಳ್ಳಾರೆ ಕ್ಲಬ್ ಕಾರ್ಯದರ್ಶಿ ವಿಶ್ವನಾಥ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಕಾರ್ಯದರ್ಶಿ ರವಿಕುಮಾರ್ ರೈ, ಶ್ರೀಮತಿ ಕಸ್ತೂರಿಕಲಾ‌ ಎಸ್ ರೈ, ಶ್ರೀಮತಿ ರಶ್ಮಿ ಅಶ್ವನ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರಿನ ಐದು ಅಂಗನವಾಡಿ ಕೇಂದ್ರಗಳಿಗೆ ಸ್ಟೀಲ್ ಕಪಾಟುಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆ ತೋರಿದ ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಮತ್ತು ಮುಖ್ಯ ಶಿಕ್ಷಕ ಪ್ರಕಾಶ್ ಮೂಡಿತ್ತಾಯ ಮತ್ತು ಶಿಕ್ಷಕಿ ಶ್ರೀಮತಿ ಮಮತಾ ಪ್ರಕಾಶರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಜ. 13ರಂದು ನಡೆದ ಸವಣೂರು ಸಹಕಾರಿ ಸಂಘದ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಜಯಗಳಿಸಿದ ಅಶ್ವಿನ್ ಎಲ್. ಶೆಟ್ಟಿಯವರನ್ನು ವೇದಿಕೆಗೆ ಆಹ್ವಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಮುಂದಾಳತ್ವವನ್ನು ವಹಿಸಿದ್ದ ಸವಣೂರು ಕೆ. ಸೀತಾರಾಮ ರೈಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಎನ್. ಜಯಪ್ರಕಾಶ್ ರೈ ವಂದಿಸಿದರು.

ನ್ಯಾಯವಾದಿ ದಳ ಸುಬ್ರಾಯ ಭಟ್ ಮತ್ತು ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರಾದ ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭೋಜನ ನಡೆಯಿತು.ಸಭಾ ಕಾರ್ಯಕ್ರಮಕ್ಕೆ ಮೊದಲಾಗಿ ಡಾ. ವಿದ್ಯಾಭೂಷಣ ಬೆಂಗಳೂರು ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.