ಬಳ್ಪ ಗ್ರಾಮದ ನೇರ್ಪು ಮಾಲ್ಯಾದ ಬಳ್ಪ ಕೇನ್ಯ ಗ್ರಾಮ ದೈವ ಶ್ರೀ ಉಳ್ಳಾಕುಲು ಮತ್ತು ಶ್ರೀ ಶಿರಾಡಿ ದೈವ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವಗಳು ನಿನ್ನೆ ಮತ್ತು ಇಂದು ಜರಗಲಿದೆ. ಜ. 16ರಂದು ರಾತ್ರಿ
ಶ್ರೀ ಉಳ್ಳಾಕುಲು ದೈವಗಳ ಭಂಡಾರ ತೆಗೆಯುವುದು ಬಳಿಕ ಅನ್ನಸಂತರ್ಪಣೆ ನಡೆಯಿತು. ಜ. 17ರಂದು ಪ್ರಾತಃ ಕಾಲ ಮಲ್ಲ ಉಳ್ಳಾಕುಲು ನೇಮ, ಬಳಿಕ ಎಲ್ಯ ಉಳ್ಳಾಕುಲು, ಉಳ್ಳಾಲ್ತಿ, ಮೈಸಂದಾಯ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಶ್ರೀ ಶಿರಾಡಿ ರಾಜನ್ ದೈವ ಮತ್ತು ಪರಿವಾರ ದೈವಗಳ ಭಂಡಾರ ತೆಗೆದು ಪರಿವಾರ ದೈವಗಳ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಇಂದು ಬೆಳಗ್ಗೆ ಗಂಟೆ 6-30ಕ್ಕೆ ಶಿರಾಡಿ ರಾಜನ್ ದೈವದ ನೇಮ, ಮಧ್ಯಾಹ್ನ ಗಂಟೆ 12-00ಕ್ಕೆ ಶಿರಾಡಿ ದೈವ ಗಡಿಗೆ ಹೋಗುವುದು ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ.