ಇಟಗಿ ಸಾಂಸ್ಕೃತಿಕ ಉತ್ಸವ:ತಾರಸಿ ಕೃಷಿಕ ಪಡ್ಡಂಬೈಲು ಕೃಷ್ಣಪ್ಪ ಗೌಡರಿಂದ ಉದ್ಘಾಟನೆ

0

ಇಟಗಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಅಂತರಾಷ್ಟ್ರೀಯ ಖ್ಯಾತಿಯ ತಾರಸೀ ಕೃಷಿಕರಾದ ಪಡ್ಡಂಬೈಲು ಕೃಷ್ಣಪ್ಪ ಗೌಡ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕೃಷ್ಣಪ್ಪಗೌಡ ಪಡ್ಡಂಬೈಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ’ಇಟಗಿ ಉತ್ಸವವನ್ನು ಕಳೆದ 20 ವರ್ಷಗಳಿಂದ ಸತತವಾಗಿ ಯಶಸ್ವಿಯಾಗಿ ಪ್ರತಿವರ್ಷ ಮೂರು ನಾಲ್ಕು ದಿನಗಳವರೆಗೆ ಅದ್ದೂರಿಯಾಗಿ ಆಚರಿಸುತ್ತಾ ಇಟಗಿಯನ್ನು ರಾಜ್ಯಮಟ್ಟದಲ್ಲಿ ಕಲಾ ರಾಧಕರು ಸಾಹಿತ್ಯ ಅಭಿಮಾನಿಗಳು ತಿರುಗಿ ನೋಡುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ನಾಗರಿಕ ವೇದಿಕೆಯ ರಾಜ್ಯಾಧ್ಯಕ್ಷರಾದ ಮಹೇಶ್ ಬಾಬು ಸುರ್ವೇ ಅವರು ಜೊತೆಗೆ ಕರ್ನಾಟಕ ಗಮಕ ಸಾಹಿತ್ಯ ಪರಿಷತ್ತು ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಫಕೀರಪ್ಪ ವಜ್ರಬಂಡಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀನಿವಾಸ ಚಿತ್ರಗಾರ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಘಟಕರಾದ ಎಂ ಬಿ ಅಳವಂಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರರು ಸಿದ್ದಪ್ಪ ಹಂಚಿನಾಳ ಚಲನಚಿತ್ರ ಸಾಹಿತಿಮಹೇಶ್ ಮನ್ನಾಪುರ್, ಉಮೇಶ ಸುರ್ವೇ ಸೇರಿದಂತೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಲಾತಂಡಗಳು ಡ್ಯಾನ್ಸ್ ಅಕಾಡೆಮಿಗಳು ಸಾಂಸ್ಕೃತಿಕ ಸಂಘಗಳು ಸಾಂಸ್ಕೃತಿಕ ಪ್ರದರ್ಶನ ನೀಡಿದರು. ಪ್ರತಿಭಾವಂತ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿಲಾಯಿತು. ಉಮೇಶ ಸುರ್ವೆ ವಂದಿಸಿದರು.